ಕೆ.ನಾಗಪ್ಪ ಸವಿ ನೆನಪು ಪುರಸ್ಕಾರ ಸಮಾರಂಭ-ಶಂಬೋಜಿ

ಸಿಂಧನೂರು.ನ.೧೮- ದಿ.ಕೆ ನಾಗಪ್ಪನವರ ಸವಿ ನೆನಪಿನ ಅಂಗವಾಗಿ ವಿವಿಧ ಸಾಮಾಜಿಕ ದಾರ್ಮಿಕ .ಶೈಕ್ಷಣಿಕ ಕಾರ್ಯಕ್ರಮ ಗಳನ್ನು ಕೆ ನಾಗಪ್ಪ ಚಾರಟೇಬಲ್ ಟ್ರಸ್ಟ ಮಾಡುತ್ತ ಬಂದಿದೆ ನ ೨೦ ರಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮೋರೊಪ ಸಮಾರಂಭವನ್ನು ನಗರದ ಸತ್ಯ ಗಾರ್ಡನ್ ದಲ್ಲಿ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ ಸಂಚಾಲಕರಾದ ಬೀರಪ್ಪ ಶಂಬೋಜಿ ಶಿಕ್ಷಕರು ತಿಳಿಸಿದರು.
ನಗರದ ಕೆ ಕರಿಯಪ್ಪ ನವರ ಕಛೇರಿಯಲ್ಲಿ ಕರೆದ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಹಿಂದುಳಿದ ಅಲ್ಪಸಂಖ್ಯಾತರ ದಿನ ದಲಿತರ ವರ್ಗದ ನಾಯಕರಾದ ಕೆ.ನಾಗಪ್ಪ ನವರು ಜೀವಿತ ಅವದಿಯಲ್ಲಿ ಸದಾ ಸಾಮಾಜಿಕ ಸೇವೆ ಮಾಡುತ್ತು ಬಂದಿದ್ದು ಇಂದಿಗೂ ಸಹ ಜನ ಅವರನ್ನು ಸ್ಮರಿಸುತ್ತಿದ್ದಾರೆ ಅವರಂತೆ ಅವರ ಮಗ ಕೆ ಕರಿಯಪ್ಪ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ
ಎಸ್‌ಎಸ್‌ಎಲ್‌ಸಿ ಪಿಯುಸಿ ಪದವಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಕೇ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದು ಆಶು ಕವಿ ಸಿದ್ದಪ್ಪ ಬಿದರಿ ಬಿಳಗಿ ಇವರು ಬಾಷಣಕಾರರಾಗಿ ಬರಲಿದ್ದಾರೆ. ಅಂದು ಮುಂಜಾನೆ ಡೊಳ್ಳುಕುಣಿತ ಭರತನಾಟ್ಯ ನಂದಿಕೋಲು ಜಾನಪದ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಕೆ.ನಾಗಪ್ಪ ಹಾಗೂ ಕೆ ಕರಿಯಪ್ಪ ಅಭಿಮಾನಿಗಳು ಹಾಗೂ ಸಾರ್ವಜನಿಕರ ಬಾಗವಹಿಸಿ ಕಾರ್ಯಕ್ರಮನ್ನು ಯಶಸ್ವಿಗೊಳಿಸಬೇಕು ಎಂದು ಬೀರಪ್ಪ ಶಂಭೋಜಿ ಮನವಿ ಮಾಡಿಕೊಂಡರು
ಕೆ.ನಾಗಪ್ಪ ಚಾರಟೇಬಲ್ ಟ್ರಸ್ಟ ಸಂಸ್ಥಾಪಕ ಅಧ್ಯಕ್ಷ ರಾದ ಕೆ ಕರಿಯಪ್ಪ ಸಂಚಾಲಕರಾದ ಅಮರೇಶಪ್ಪ ಮೈಲಾರ್ ಕುರುಬ ಸಮಾಜದ ತಾಲುಕಾ ಅಧ್ಯಕ್ಷರಾದ ವಿ.ಬಸವರಾಜ ಅಹಿಂದ ಸಂಘಟನೆಯ ಅಧ್ಯಕ್ಷ ರಾದ ಜೆ.ರಾಯಪ್ಪ ವಕೀಲರು ಅಬಿಮಾನಿಗಳಾದ ದಾವಲಸಾಬ ದೊಡ್ಡ ಮನಿ ರಾಜು ಅಡವಿಬಾವಿ ಹುಸೇನಪ್ಪ ಸೂಲಂಗಿ ಮಲ್ಲಮ್ಮ ಸೇರಿದಂತೆ ಇತರರು ಇದ್ದರು .