ಕೆ. ಝರೆಪ್ಪಗೆ ಪಿಎಚ್‍ಡಿ

ಬೀದರ್: ಮಾ.10:ಮಧ್ಯಪ್ರದೇಶದ ಸೆಹೋರ್‍ನ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಆಫ್ ಟೆಕ್ನಾಲಜೀಸ್ ಆ್ಯಂಡ್ ಮೆಡಿಕಲ್ ಸೈನ್ಸೆಸ್ ಇಲ್ಲಿಯ ರಾಜೀವ್ ಗಾಂಧಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಕೆ. ಝರೆಪ್ಪ ಅವರಿಗೆ ಪಿ.ಎಚ್.ಡಿ ಪದವಿ ನೀಡಿದೆ.

ಡಾ. ರೇಷ್ಮಾ ಆರಾ ಅವರ ಮಾರ್ಗದರ್ಶನದಲ್ಲಿ ಅವರು ಮಂಡಿಸಿದ ‘ಹಿಸ್ಟೊರಿಕಲ್ ಆ್ಯಂಡ್ ಸೋಸಿಯೊ- ಎಕಾನಾಮಿಕ್ ಕಂಡಿಷನ್ಸ್ ಆಫ್ ಮೆಡೀವಲ್ ಕರ್ನಾಟಕ ವಿಥ್ ಸ್ಪೇಷಲ್ ಟು ಬೀದರ್ (ಕರ್ನಾಟಕ)’ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಗೆ ಮಾನ್ಯ ಮಾಡಿದೆ.

ಕೆ. ಝರೆಪ್ಪ ಮೂಲತಃ ಔರಾದ್ ತಾಲ್ಲೂಕಿನ ತೇಗಂಪುರ ಗ್ರಾಮದವರಾಗಿದ್ದಾರೆ. ಅವರಿಗೆ ಪಿ.ಎಚ್.ಡಿ ಪದವಿ ದೊರೆತದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.