ಕೆ.ಗುಡದಿನ್ನಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿ ಕಳಪೆ

ತನಿಖೆಗೆ ಒತ್ತಾಯಿಸಿ ಕ.ದ.ಸಂ. ಸಮಿತಿಯಿಂದ ಧರಣಿ
ಸಿರವಾರ.ಮಾ೨೪- ಗ್ರಾಮಪಂಚಾಯತಿ ವ್ಯಾಪ್ತಿಯ ೨೦೧೮-೧೯ ಹಾಗೂ ೨೦೧೯-೨೦ನೇ ಸಾಲಿನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಹೆಸರಿನಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಅಕ್ರಮ, ಕಳಪೆ ಕಾಮಗಾರಿ ಮಾಡಿದ್ದೂ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಿರವಾರ ತಾಲೂಕ ಘಟಕದಿಂದ ಕೆ.ಗುಡದಿನ್ನಿ ಗ್ರಾಮಪಂಚಾಯತಿಯ ಮುಂದೆ ಅನಿರ್ಧಿಷ್ಠ ದಿನದ ವರೆಗೂ ಧರಣಿಯನ್ನು ಹಮ್ಮಿಕೊಳುವ ಮೂಲಕ ಒತ್ತಾಯಿಸಿದರು.
ತಾಲೂಕಿನ ಕೆ.ಗುಡದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೧೮-೧೯, ೨೦೧೯-೨೦ನೇ ಸಾಲಿನಲ್ಲಿ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬಿ.ಓ.ಸಿ ಹಣವನ್ನು ನಕಲಿ ದಾಖಲೆಗಳನ್ನು ಸೃಷ್ಠಿಸಿ ಕಾಮಗಾರಿಗಳನ್ನು ನಿರ್ವಹಿಸಿ ಮನೆಯಲ್ಲಿಯೆ ಕುಳಿತು, ಎಂ.ಬಿ.ಪುಸ್ತಕವನ್ನು ಬರೆದು ೪೯ ಲಕ್ಷ ರೂ ಹಣವನ್ನು ಲೂಟಿ ಮಾಡಿ ಕೆಲವೊಂದು ಕಾಮಗಾರಿಗಳನ್ನು ಅರ್ಧಮರ್ಧ ಮಾಡಿರುತ್ತಾರೆ. ಇದರ ಬಗ್ಗೆ ದೂರು ನೀಡಿದರೂ ಸಹ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ೧೪ ನೇ ಹಣಕಾಸು ಯೋಜನೆ ಅಡಿಯಲ್ಲಿ ಚರಂಡಿ, ಹೂಳೆತ್ತುವುದು, ಮೋಟರ್ ರಿಪೇರಿ, ವಿದ್ಯುತ್ ಬಲ್ದಪ್, ವಾಟರ್ ಸಪ್ಲೈ, ಎಸ್.ಸಿ ಓಣೆಯಲ್ಲಿ ಯಾವುದೇ ಕಾಮಗಾರಿ ಮಾಡದೆ ಸುಮಾರ ೮೧ ಲಕ್ಷ ರೂ ಹಣವನ್ನು ಲೂಟಿ ಮಾಡಿದ್ದಾರೆ. ಈ ಎಲ್ಲಾ ಕಾಮಗಾರಿಗಳನ್ನು ಕೂಲಂಕುಷವಾಗಿ ಪರಿಶಿಲನೆ ಮಾಡಿ, ತನಿಖೆ ಮಾಡಿ, ತಪ್ಪತಸ್ಥರ ಮೇಲೆ ಸೂಕ್ತ ಕ್ರಮಕೈಗೊಳಬೇಕು. ಪಿ.ಡಿ.ಓಗಳ ಮೇಲೆ ಕಾನೂನು ಕ್ರಮಕೈಗೊಳಬೇಕು, ಕೆ.ಗುಡದಿನ್ನಿ, ಹಾಗೂ ಜಂಬಲದಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೇಯನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಸಂಚಾಲಕ ರಮೇಶ ಜಂಬಲದಿನ್ನಿ, ನಾಗರಾಜಬಾಗಲವಾಡ, ಗಂಗಾಧರ ಹಿಂದಿನಮನೆ, ಮೌನೇಶ ಕೋರಿ,. ಜಗದೀಶ ಬಾಗಲವಾಡ,ಹಂಪಮ್ಮ, ನಾಗಮ್ಮ, ಗಂಗಮ್ಮ, ರೇಣುಕಮ್ಮ, ಕುರ್ಮಾ ಛಲುವಾದಿ, ಕರಿಯಪ್ಪ ಗುಡದಿನ್ನಿ ಸೇರಿದಂತೆ ಇನ್ನಿತರರು ಇದ್ದರು.