ಕೆ ಕೆ ಹಟ್ಟಿ ಎ.ಡಿ.ಗುಡ್ಡದಲ್ಲಿ ಲೋಕೇಶ ವಿ ನಾಯಕ ಅಬ್ಬರದ ಪ್ರಚಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ. 3 :- ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೆರೆಕಾವಲರಹಟ್ಟಿ ಹಾಗೂ ಅಮರದೇವರಗುಡ್ಡದಲ್ಲಿ ಕೂಡ್ಲಿಗಿ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅಬ್ಬರದ ಪ್ರಚಾರಕ್ಕೆ ಗ್ರಾಮಸ್ಥರು  ಅಭೂತಪೂರ್ವ ಸ್ವಾಗತ ಕೋರಿದರು.
ಅಭ್ಯರ್ಥಿ ಮಾತನಾಡಿ, ಬಿಜೆಪಿ ಸರ್ಕಾರದ ಸಾಧನೆಗಳೇ ನನಗೆ ಶ್ರೀರಕ್ಷೆಯಾಗಿದ್ದು ಕ್ಷೇತ್ರದಲ್ಲಿ ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ  ಸೋತರು ಕ್ಷೇತ್ರ ಬಿಡದೆ ಜನಸಂಪರ್ಕದಲ್ಲಿದ್ದದ್ದು ನನಗೆ ಈ ಚುನಾವಣೆಯಲ್ಲಿ ವಿಶ್ವಾಸಿಗನಾಗಿದ್ದೇನೆ ಜನರ ಈ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿರುವೆ ಕ್ಷೇತ್ರವಾರು ಬಿಜೆಪಿಗೆ ಬೆಂಬಲಿಸುತ್ತಿದ್ದು ಈ ಬಾರಿ ಮತದಾರ ಪ್ರಭುಗಳಾದ ನೀವು ಮತ ಹಾಕುವ ಮೂಲಕ ನನ್ನನ್ನು ಆಶೀರ್ವದಿಸಿ ಎಂದು ಮತದಾರರಲ್ಲಿ ಮತಯಾಚಿಸಿದರು.
ಪಕ್ಷದ ಮುಖಂಡರಾದ ಬಿ ಭೀಮೇಶ, ಗುಳಿಗಿ ವೀರೇಂದ್ರ, ಪ ಪಂ ಸದಸ್ಯ ಚಂದ್ರು, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಎಸ್ ಸುರೇಶ, ಸಣ್ಣ ಕೊತ್ತಲಪ್ಪ, ಮಂಜುನಾಥ ನಾಯಕ, ಸಾಣೇಹಳ್ಳಿ ಹನುಮಂತಪ್ಪ, ಕೆರೆಕಾವಲರಹಟ್ಟಿ ವೀರಣ್ಣ, ಬಸವರಾಜ, ನಾಗರಾಜ, ರಮೇಶ, ಅಮರದೇವರಗುಡ್ಡದ ಇಂಜಿನಿಯರ್ ಕೊಟ್ರೇಶ, ಚಂದ್ರಪ್ಪ, ಅಜ್ಜಣ್ಣ, ಮಹಾದೇವ, ಪ ಪಂ ಸದಸ್ಯ ರಮೇಶ, ನಾರಪ್ಪ ಹಾಗೂ ಪ್ರಕಾಶನಾಯ್ಕ್ ಇತರರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.