
ಬೀದರ್,ಸೆ.06:ನಗರದ ಕವಿರತ್ನ ಕಾಳಿದಾಸ ಪದವಿ ಕಾಲೇಜಿನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ, ಶಿಕ್ಷಕರ ದಿನಾಚರಣೆ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರಿರಾವ ಕುಲಕರ್ಣಿ ರವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಡಾ. ರಾಧಾಕೃಷ್ಣನ್ ರವರು ಸರ್ವ ಶ್ರೇಷ್ಠ ಶಿಕ್ಷಕರಾಗಿದ್ದರು. ಇವರ ಸೇವಾಅವಧಿಯಲ್ಲಿ ಶಿಕ್ಷಣದ ಬಹಳಷ್ಟು ಸುಧಾರಣೆಗಳು ಮಾಡಿದರು ಹಾಗೆಯೆ ಮಾಹಾನ ಶಿಕ್ಷಕರು ಆಗಿದ್ದರು, ಮುಂದೆ ಭಾರತದ ರಾಷ್ಡ್ರಪತಿಯಾಗಿ ಆಯ್ಕೆಯಾದರು, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಅಧಿಕಾರ ಅವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು ದೇಶದ ಅಭಿವೃದ್ದಿಗಾಗಿ ತಮ್ಮ ಜೀವನವನ್ನು ಮೂಡುಪಾಗಿಟ್ಟಿದ್ದರು. ದಿ:05-09-1888 ರಲ್ಲಿ ಜನಿಸಿದರು, ಆ ನಿಮಿತ್ಯಾವಾಗಿ ಪ್ರತಿ ವರ್ಷ ಇವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿದ್ದೆವೆ ಎಂದರು.
ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ಗೋವಿಂದ ಮೋತಿರಾಮ ಸ್ವಾಗತಿಸಿದರೆ, ಗ್ರಂಥಪಾಲಕರಾದ ವೈಜಿನಾಥ ಎಮ್. ಗೌಡನಗುರು ವಂದಿಸಿದರು. ದೈಹಿಕ ನಿರ್ದೆಶಕರಾದ ಓಂಕಾರ ಮಾಶೆಟ್ಟಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.