ಕೆ.ಕೆ.ಡಿ.ಬಿ. ಧಾರ್ಮಿಕ ಸಂಸ್ಥೆಗಳತ್ತಲೂ ಗಮನಹರಿಸುವಂತಾಗಲಿ:ಡಾ. ರಾಜಶೇಖರ ಶ್ರಿಗಳು

ಕಲಬುರಗಿ:ಸೆ.02:ಕಲ್ಯಾಣ ಕರ್ನಾಟಕ ಭಾಗದ ಧಾರ್ಮಿಕ ಸಂಸ್ಥೆಗಳು ಆರ್ಥೀಕ ನೆರವು ನೀಡುವುದತ್ತ ಕೆ.ಕೆ.ಡಿ.ಬಿ. ಯು ವಿಶೇಷ ಗಮನ ನೀಡಬೇಕೆಂದು ಬೆಮಳಖೇಡ ಹಿರೇಮಠ ಸಂಸ್ಥಾನದ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಕೆ.ಕೆ.ಡಿ.ಬಿ. ಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಜೇವರ್ಗಿಯ ಜನಪ್ರಿಯ ಶಾಸಕರಾದ ಡಾ. ಅಜಯಸಿಂಗ್ ಅವರುನ್ನು ಅವರ ಸ್ವ-ಗೃಹದಲ್ಲಿ ಸನ್ಮಾನಿಸಿ ಹರಿಸಿದ ನಂತರ ಮಾನ್ಯ ಅಧ್ಯಕ್ಷರೊಂದಿಗೆ ಮನದಾಳದ ಮಾತನ್ನು ಹಂಚಿಕೊಂಡರು. ಮಂಡಳಿಯ ಅಭಿವೃದ್ಧಿ ವ್ಯಾಪ್ತಿಯಿಂದ ಹೊರಗಿಟ್ಟಿರುವ ಧಾರ್ಮಿಕ ಕ್ಷೇತ್ರವನ್ನು ಸಹ ವ್ಯಾಪ್ತಿಗೆ ಸೇರಿಸಿಕೊಂಡರೆ ಅಭಿವೃದ್ಧಿಯ ಕಾರ್ಯ ಪರಿಪೂರ್ಣವಾಗುವುದು. ಸಾರ್ವಜನಿಕ ಕ್ಷೇತ್ರಗಳಲ್ಲಿ ಮಠಮಾನ್ಯ ದೇವಾಲಯ ಮುಂತಾದವುಗಳು ಜನಗಳಿಗೆ ಅತೀ ಹೆಚ್ಚಿನ ಅನುಕೂಲವಾಗುವವು. ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಹತ್ತಿರವಿರುವ ಕನ್ನಡಿಗರು ಹೆಚ್ಚಾಗಿ ಭೇಟಿ ಕೊಡುವ ಗಡಿರಾಜ್ಯಗಳ ಧಾರ್ಮಿಕ ಕ್ಷೇತ್ರಗಳನ್ನು ಸಹ ಇದರ ವ್ಯಾಪ್ತಿಗೆ ಸೇರಿಸಿದರೆ ಈ ಭಾಗದ ಜನಗಳಿಗೂ ಹೆಚ್ಚಿನ ಅನುಕೂಲ ವದಗುವುದು ಎಂದು ಶ್ರೀಗಳು ಹೇಳಿದರು. ಮಾನ್ಯ ಅಧ್ಯಕ್ಷರಾದ ಡಾ. ಅಜಯಸಿಂಗ್ ಅವರು ಶ್ರೀಗಳ ಸಲಹೆಗೆ ಸಕಾರಾತ್ಮವಾಗಿ ಸ್ಪಂದಿಸಿದರು. ಈ ಸಂಧರ್ಭದಲ್ಲಿ ಶ್ರೀಮತಿ ಪ್ರಭಾವತಿ ಧರ್ಮಸಿಂಗ್, ಮಾಜಿ ಎಂ.ಎಲ್.ಸಿ.
ಶ್ರೀ ವಿಜಯಸಿಂಗ್, ಶ್ರೀ ಕಂಟೆಪ್ಪ ಬಂಗಾರೆ ಇದ್ದರು.