ಕೆ.ಕೆ.ಡಿಗ್ರಿ ಕಾಲೇಜ: ಎನ್.ಎಸ್.ಎಸ್ ಶಿಬಿರ

ಬೀದರ್:ಜು.6: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಮತಾಬಾದ ನಲ್ಲ್ಲಿ ಗಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯ, ಬೀದರ ಹಾಗೂ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ದತ್ತು ಪಡೆದ ನೇಮತಾಬಾದ ಗ್ರಾಮ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರಕ್ಕೆ ಚಾಲನೆ ನೀಡಲಾಗಿತ್ತು, ಕಾರ್ಯಕ್ರಮವು ಸತತವಾಗಿ ವಾರಗಳವರೆಗೆ ನಡೆಯುವುದು, ಪ್ರತಿ ದಿನ ಬೇರೆ ಬೇರೆ ವಿಷಯಗಳ ಮೇಲೆ ಕಾರ್ಯಕ್ರಮಗಳು ಜರುಗುತ್ತಿವೆ, ಶಿಬಿರದ 5ನೇ ದಿನದ “ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಯುವಕರ ಸಹಯೋಗ” ಎಂಬ ವಿಷಯದ ಕಾರ್ಯಕ್ರಮ ನಡೆಯಿತು.

ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಗೋರನಳ್ಳಿ ಪ್ರಾಂಶುಪಾಲರಾದ ದೇವಿದಾಸ ತುಮಕುಂಟೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಕೃಷಿ ಕ್ಷೇತ್ರದಲ್ಲಿ ನಮ್ಮ ದೇಶ ಮತ್ತು ಬೇರೆ ದೇಶಗಳಿಗೆ ಹೋಲಿಸಿದರೆ ಕೇನಡಾ ದೇಶ ಬಹಳ ಮುಂದುವರೆದಿದೆ, ನಮ್ಮಲಿ ಯುವಕರು ಮತ್ತು ವಿಶೇಷವಾಗಿ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳ ಕಡೆ ಗಮನ ಹರಿಸಿ ಕೇಲಸ ಮಾಡಿದದಾಗ ಮಾತ್ರ ನಾವು ಕೂಡ ಕೇನಡಾ ದೇಶಕ್ಕೂ ಮೀರಿಸಬಹುದು ಎಂದರು.ಮಹಾವಿದ್ಯಾಲಯದ ಕನ್ನಡ ಸಹ ಪ್ರಾದ್ಯಾಪಕರಾದ ಶ್ರೀನಿವಾಸ ಖರಾತೆ ರವರು ಅಧ್ಯಕ್ಷತೆವಹಿಸಿ ಮಾತನಾಡುತ್ತ ಸರಕಾರ ವಿಶ್ವವಿದ್ಯಾಲಯಗಳ ಮೂಲಕ ಮಹಾವದ್ಯಾಲಯಗಳಿಗೆ ರಾಷ್ಟ್ರೀಯ ಸೆವಾ ಯೋಜನೆ (ಎನ್.ಎಸ್.ಎಸ್) ಶಿಬಿರದ ಮಹತ್ವ ಏನು ಎಂಬುವುದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿಯೇ ರಾಷ್ಟ್ರೀಯ ಸೆವಾ ಯೋಜನೆ (ಎನ್.ಎಸ್.ಎಸ್) ಶಿಬಿರ ಹಮ್ಮಿಕೋಳಬೇಕಾಗಿರುತ್ತದೆ, ರಾಷ್ಟ್ರನಿರ್ಮಾಣದಲ್ಲಿ ಯುವಕರ ಪಾತ್ರಗಳೆನು ಎಂಬುವದು ಇಂತಹ ಅನೇಕ ಶಿಬಿರಗಳಿಂದ ಮಾತ್ರ ಸಾದ್ಯ ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಗಿರಿರಾವ ಕುಲಕರ್ಣಿಯವರು ಮಾತನಾಡುತ್ತ ಸರಕಾರವು ವಿಶೆಷವಾಗಿ ವಿಧ್ಯಾರ್ಥಿಗಳಿಗಾಗಿ ಹಲವು ಯೋಜನೆಗಳಲೋಂದಾದ ರಾಷ್ಟ್ರೀಯ ಸೆವಾ ಯೋಜನೆ (ಎನ್.ಎಸ್.ಎಸ್) ಶಿಬರವು ಇದೆ, ಇದರ ಸದುಪಯೊಗ ಪಡೆದುಕೋಳ್ಳಬೇಕು ಎಂದರು.

ಮಹಾವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಗೋವಿಂದ ಮೊತಿರಾಮ ರವರು ಸ್ವಾಗತಿಸಿದರು, ಮಹಾವದ್ಯಾಲಯದ ಗ್ರಂಥಪಾಲಕರಾದ ವೈಜಿನಾಥ ಎಮ್.ಗೌಡನಗುರು ನೀರುಪಿಸಿದರೆ, ಡಾ.ರಾಜಕುಮಾರ ರಾಠೋಡ ವಂದಿಸಿದರು. ಕಾಂiÀರ್iಕ್ರಮದಲ್ಲಿ ಶಾಲೇಯ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.