
ಬೀದರ,ಜು:08: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಮತಾಬಾದ ನಲ್ಲ್ಲಿ ಗಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯ, ಬೀದರ ಹಾಗೂ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ದತ್ತು ಪಡೆದ ನೇಮತಾಬಾದ ಗ್ರಾಮ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರದ ಇಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕುವ ಮೂಲಕ ಉದ್ಘಾಟಿಸಿದ ಡಿ. ದೇವರಾಜ ಅರಸ್ ಡಿ.ಎಡ್. ಕಾಲೇಜಿನ ಅಧಿಕ್ಷಕರಾದ ವೈಜಿನಾಥ ಬಿರಾದರ ಅವರು ಮಾತನಾಡಿ, ಈ ಶಾಲೆಯಲ್ಲಿ ಸತತವಾಗಿ ಏಳು ದಿನಗಳಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರ ಪ್ರತಿ ದಿನ ಬೇರೆ ಬೇರೆ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ಬಂದು ಶಿಬಿರಾರ್ಥಿಗಳಿಗೂ ಹಾಗೂ ಶಾಲೆಯ ಮಕ್ಕಳಿಗೂ ತಿಳುವಳಿಕೆ ಮೂಡಿಸುವದಲ್ಲದೆ ವಿದ್ಯಬ್ಯಾಸದ ಜೋತೆಗೆ ಇಂತಹ ಶಿಬಿರಗಳಿಂದ ಹೆಚ್ಚಿನ ಅನುಭವ ಪಡೆದುಕೋಳ್ಳುವ ಅವಕಾಶ ಸಿಗುತ್ತದೆ ಎಂದರು.
ಶಾಲೇಯ ಮುಖ್ಯ ಗುರುಗಳಾದ ರಮೇಶ ಮಾಣಿಕ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಏಳು ದಿನಗಳಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರವು ನಡೆಯುತ್ತಿರುವದರಿಂದ ನಮ್ಮ ಶಾಲೆಯಲ್ಲಿ ಹಬ್ಬದ ವಾತಾವರಣವಾಗಿತ್ತು, ಸರಕಾರ, ವಿಶ್ವವಿದ್ಯಾಲಯ ಮತ್ತು ಕಾಲೇಜಿನವರಿಗೂ ನಮ್ಮ ಶಾಲೆವತಿಯಿಂದ ಅಭಿನಂದನೆ ಸಲ್ಲಿಸುತ್ತೆವೆ ಎಂದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಗಿರಿರಾವ ಕುಲಕರ್ಣಿ ಅವರ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಮಹಾವಿದ್ಯಾಲಯದ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ಗೋವಿಂದ ಮೊತಿರಾಮ ರವರು ಅಧ್ಯಕ್ಷತೆವಹಿಸಿ ಮಾತನಾಡಿ, ಎನ್.ಎಸ್.ಎಸ್.ಶಬಿರಕ್ಕೆ ಏಳು ದಿನಗಳಿಂದ ಶಿಬಿರಾರ್ಥಿಗಳು, ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಮತ್ತು ಕಾಲೆಜಿನವರೆಲ್ಲರು ಕಾರ್ಯಕ್ರಮ ಯಸಶ್ವಿಯಾಗಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಮಹಾವಿದ್ಯಾಲಯದ ಶಿವಶಂರ ಇಂದುಧರ ಉಪ್ಪಿನ ರವರು ಸ್ವಾಗತಿಸಿದರು, ಮಹಾವದ್ಯಾಲಯದ ಓಂಕಾರ ಮಾಶೆಟ್ಟಿ ನಿರೂಪಿಸಿದರೆ, ಡಾ.ಶ್ರೀನಿವಾಸ ಬಂಡಿ ವಂದಿಸಿದರು. ಗ್ರಂಥಪಾಲಕರಾದ ವೈಜಿನಾಥ ಗೌಡನಗುರು ವೇದಿಕೆಯಲ್ಲಿ ಉಪಸ್ಥಿತರಿದ್ದರುಮ
ಕಾಂiÀರ್iಕ್ರಮದಲ್ಲಿ ಶಾಲೇಯ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.