ಕೆ ಕೆ ಉತ್ಸವದ ಕುಸ್ತಿಯಲ್ಲಿ ಕೂಡ್ಲಿಗಿ ತಿಪ್ಪೇಸ್ವಾಮಿಗೆ ತೃತೀಯ ಸ್ಥಾನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಫೆ. 28 :- ಕಲಬುರುಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ 70ಕೆಜಿ ತೂಕದ ಕುಸ್ತಿ ಪಂದ್ಯಾವಳಿಯಲ್ಲಿ ಕೂಡ್ಲಿಗಿ ಸಾಮಯ್ಯನವರ ತಿಪ್ಪೇಸ್ವಾಮಿ ತೃತೀಯ ಸ್ಥಾನ ಪಡೆದು ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.
ಫೆಬ್ರವರಿ 24ರಿಂದ 26ರವರೆಗೆ ಕಲಬುರುಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಅನೇಕ ಸಾಂಸ್ಕೃತಿಕ ಹಾಗೂ ಕ್ರೀಡಾ ಪಂದ್ಯಾವಳಿ ನಡೆಸಲಾಗಿದ್ದು ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕೂಡ್ಲಿಗಿಯ ಸಾಮಯ್ಯನವರ ತಿಪ್ಪೇಸ್ವಾಮಿ 70ಕೆಜಿ ತೂಕದ ಕುಸ್ತಿ ಪಂದ್ಯಾವಳಿಯಲ್ಲಿ ಬೀದರ್ ನ ಬಸವರಾಜ ಎಂಬಾತನನ್ನ ಮಣಿಸುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ ಹಾಗೂ ಕೂಡ್ಲಿಗಿಯ ಕೀರ್ತಿ ಪತಾಕೆ ಹಾರಿಸಿದ್ದಾನೆ. ಪಟ್ಟಣದ ಹಿರಿಯರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆಗಳು ತಿಳಿಸಿದ್ದಾರೆ.