ಕೆ .ಎ .ಎಸ್.ಹುದ್ದೆಗೆ ಮೊರಾರ್ಜಿ ಶಿಕ್ಷಕ ಅಶೋಕ ಆಯ್ಕೆ

ಕೋಟಗೇರಾ (ಯರಗೋಳ):ಸೆ.23: 2017-18ನೇ ಸಾಲಿನ ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪೆÇ್ರೀಬೆಶನರಿ ಗ್ರೂಪ್ ‘ಎ’, ಗ್ರೂಪ್ ‘ಬಿ’ ವೃಂದದ 106 ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದ ಅಂತಿಮ ಆಯ್ಕೆ ಪಟ್ಟಿ ಸೆ.21 ಬುಧವಾರ ಪ್ರಕಟಗೊಂಡಿದ್ದು. ಗ್ರಾಮದ ಯುವಕ ಅಶೋಕ್ ಸಾಲೋಗಿ (ವಾಣಿಜ್ಯ ತೆರಿಗೆ ಇಲಾಖೆ) ಹುದ್ದೆಗೆ ಆಯ್ಕೆ ಆಗುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.

ಗ್ರಾಮದ ಕೃಷಿ ಕುಟುಂಬದ ದಿ. ಮಲ್ಲಪ್ಪ, ಮಲ್ಲಮ್ಮ ದಂಪತಿಯ ದ್ವಿತೀಯ ಪುತ್ರ ಅಶೋಕ ಸಾಲೋಗಿ ಛಲ ಬಿಡದೆ ಅಧ್ಯಯನ ಮಾಡಿ, ಕರ್ನಾಟಕ ಆಡಳಿತ ಸೇವೆ (ವಾಣಿಜ್ಯ ತೆರಿಗೆ ಇಲಾಖೆ) ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾನೆ. ಸದ್ಯ ಶಹಾಪುರ ತಾಲ್ಲೂಕಿನ ಬೇವಿನಹಳ್ಳಿ. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಜ್ಞಾನ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೋಟಗೇರಾ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಗಾಜರ್ ಕೋಟದಲ್ಲಿ ಪ್ರೌಢ ಶಿಕ್ಷಣ, ಯಾದಗಿರಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ, ಕಲ್ಬುರ್ಗಿ ಜಿಲ್ಲೆ ಶಹಾಬಾದ ತಾಲ್ಲೂಕಿನ ಎಸ್ ಎಸ್ ಮರಗೋಳ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ, ಯಾದಗಿರಿ ಡಾನ್ ಬಾಸ್ಕೋ ವಿದ್ಯಾಸಂಸ್ಥೆಯಲ್ಲಿ ಬಿ.ಇಡಿ ಪದವಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ ಎಸ್ ಸಿ ( ಜೀವಶಾಸ್ತ್ರ)ಪೂರ್ಣಗೊಳಿಸಿದ್ದಾರೆ.

2011 ರಲ್ಲಿ ಶಹಾಪುರ ತಾಲ್ಲೂಕಿನ ಬೇವಿನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕ, 2012 ರಲ್ಲಿ ಹೊಸಕೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುತ್ತಿಗೆ ಆಧಾರದ ಶಿಕ್ಷಕ, 2013 ರಲ್ಲಿ ಯಾದಗಿರಿ ರತನ್ ಟಾಟಾ ಟ್ರಸ್ಟ್ ಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, 2014 ಬೆಂಗಳೂರಿನ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, 2016 ರಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಉಪನ್ಯಾಸಕ ಹುದ್ದೆಗೆ ಆಯ್ಕೆ.ಸಂಜೆವಾಣಿ ಜೊತೆ ತನ್ನ ಪರೀಕ್ಷಾ ಸಿದ್ಧತೆ ಕುರಿತು ಮಾತನಾಡುತ್ತಾ ‘ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯ ಮೀಸಲಿಡುತ್ತಿದ್ದೆ, ಮಾಸಿಕ ಮ್ಯಾಕ್ಸಿನ್, ದಿನಪತ್ರಿಕೆ ಪತ್ರಿಕೆ (ಸಂಜೆವಾಣಿ ) ಓದುತ್ತಿದ್ದೆ, ಮನನ ಮಾಡಿಕೊಳ್ಳುತ್ತಿದ್ದೆ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು, ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುತ್ತಿದ್ದೆ. ಆಗಸ್ಟ್ 2020 ಕ್ಕೆ ಪ್ರಿಲಿಮ್ ನರಿ ಪರೀಕ್ಷೆ, ಫೆಬ್ರವರಿ 2021 ಮುಖ್ಯ ಪರೀಕ್ಷೆ, ಆಗಸ್ಟ್ 2022 ಸಂದರ್ಶನ ನಡೆಯಿತು. ಯಾದಗಿರಿ ರಾಜಕೀಯ, ಸಾಮ್ರಾಟ ಅಶೋಕನ ಕುರಿತು ಪ್ರಶ್ನೆಗಳು ಕೇಳಿದರು. ಸೆ.21 ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ನನ್ನ ಹೆಸರು ಇರುವುದು ಸಂತಸ ತಂದಿದೆ ಎಂದರು.
ಅಶೋಕನ ಸಾಧನೆಗೆ ವಸತಿ ಶಾಲೆಯ ಜಿಲ್ಲಾ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಸುರೈಯಾಬೇಗಂ ಹಾದಿಮನಿ ಅವರು ಶಿಕ್ಷಕ ವೃತ್ತಿಯ ಜೊತೆಗೆ ಕೆ.ಎ.ಎಸ್ ಹುದ್ದೆ ಪಡೆಯುವುದು ಅಷ್ಟು ಅಶೋಕನು ಮಕ್ಕಳಿಗೆ ಪಾಠ ಪ್ರವಚನ ಮಾಡುವುದರ ಜೋತೆಗೆ ಸಮಯ ಸಿಕ್ಕಾಗ ಸತತ ಅಧ್ಯಾಯನ ಮಾಡುತ್ತಿದ್ದ ಮಕ್ಕಳಿಗೂ ಕ್ರಿಯಾಶೀಲವಾಗಿ ಸ್ಪರ್ಧೆ ಪರೀಕ್ಷೆಯ ಬಗ್ಗೆ ವಿವರಿಸುತ್ತಿದ್ದನು ಈಗೆ ಮಾಡುತ ಅವನು ಅಂದುಕೊಂಡ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು ಅವರ ಸಾಧನೆ ನನಗೆ ವೈಯಕ್ತಿಕವಾಗಿ ಸಂತೋಷ ತಂದಿದೆ ಎಂದು ಹೇಳಿದರು ಮತ್ತು ಯಾದಗಿರಿ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಂಬೇಡ್ಕರ್ ವಸತಿ ಶಾಲೆ ಇಂದಿರಾ ಗಾಂಧಿ ವಸತಿ ಶಾಲೆ ಏಕಲವ್ಯ ವಸತಿ ಶಾಲೆಯ ಎಲ್ಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು ಅಶೋಕನ ಸಾಧನೆಗೆ ಅಭಿನಂದಿಸಿದ್ದಾರೆ .