ಕೆ.ಎಸ್.ಭಗವಾನ್ ವಿರುದ್ಧ ಒಕ್ಕಲಿಗರ ಆಕ್ರೋಶ

ಸಂಜೆವಾಣಿ ನ್ಯೂಸ್
ಮೈಸೂರು: ಅ.15:- ಒಕ್ಕಲಿಗರು ಸಂಸ್ಕೃತಿ ಹೀನರೆಂದು ಹೇಳಿಕೆ ನೀಡಿದ ಪ್ರಗತಿಪರ ಚಿಂತಕ ಪೆÇ್ರ.ಕೆ.ಎಸ್.ಭಗವಾನ್ ಹೇಳಿಕೆಯ ವಿರೋಧಿಸಿದ ಮೈಸೂರು- ಚಾಮರಾಜನಗರ ಒಕ್ಕಲಿಗರ ಸಂಘದ ಮುಖಂಡರು ಭಗವಾನ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕುವೆಂಪುನಗರದ ಭಗವಾನ್ ನಿವಾಸಕ್ಕೆ ಮುತ್ತಿಗೆ ಹಾಕಿದ ಒಕ್ಕಲಿಗ ಸಮುದಾಯದ ಮುಖಂಡರು ಭಗವಾನ್ ಅವರು ಮಹಿಷಾ ದಸರಾ ವೇದಿಕೆಯಲ್ಲಿ ಸಮುದಾಯದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ. ಇದೇ ಮೊದಲಲ್ಲ ಈ ಹಿಂದೆಯೂ ಸಹ ಸಮುದಾಯ ಹಾಗೂ ಸಂಸ್ಕೃತಿಯ ಭಾವನೆ ಕೆರಳುವ ಹೇಳಿಕೆ ನೀಡಿ ಇದೇ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇದಾಗಿಯೂ ಅವರು ಹೇಳಿಕೆ ಮುಂದುವರೆಸಿದ್ದಾರೆ. ಈ ಹಿಂದಿನ ಪ್ರಕರಣದಲ್ಲಿಯೇ ಬಂಧನ ಮಾಡಿದ್ದರೆ ಅವರು ಮತ್ತೆ ಅಂತಹ ಹೇಳಿಕೆ ಕೊಡುತ್ತಿರಲಿಲ್ಲ. ಹೀಗಾಗಿ ಈ ಕೂಡಲೇ ಅವರನ್ನು ಬಂಧಿಸಬೇಕು. ಮತ್ತೊಬ್ಬರ ಭಾವನೆಗೆ ಧಕ್ಕೆಯುಂಟು ಮಾಡುವ ಭಗವಾನ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಹಾಗೂ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಮಾತ್ರವಲ್ಲದೆ, ಸಮುದಾಯದ ಬಗ್ಗೆ ಮಾತನಾಡುವ ಅವರು ಯಾವ ಸಮುದಾಯಕ್ಕೆ ಜನ್ಮ ತಾಳಿದ್ದರೆಂದು ಸ್ಪಷ್ಟಪಡಿಸಬೇಕೆಂದರಲ್ಲದೆ, ಮನೆ ಎದುರು ಎಳ್ಳು, ನೀರು ಬಿಟ್ಟು ಭಗವಾನ್ ಅವರಿಗೆ ಬಿಟ್ಟಿರುವುದಾಗಿ ಅಣುಕು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಅವರ ಮನೆಯ ಮುತ್ತಿಗೆಗೆ ಯತ್ನಿಸಿದ ನೂರಾರು ಮಂದಿಯನ್ನು ಪೆÇಲೀಸರು ತಡೆದರು. ಈ ವೇಳೆ ಕೆಲ ಕಾಲ ರಸ್ತೆ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟಾನಾಕಾರರನ್ನು ಬಂಧಿಸಿ ಪೆÇಲೀಸರು ಕರೆದೊಯ್ದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್ ಮಾತನಾಡಿ, ಕುವೆಂಪು ಅವರ ಕಾಲಘಟ್ಟದಲ್ಲಿ ಉಲ್ಲೇಖವಾದ ಹೇಳಿಕೆಯನ್ನು ಮಹಿಷ ವೇದಿಕೆ ಮೇಲೆ ಹೇಳುವಾಗ ಅಲ್ಲಿದ್ದವರೆಲ್ಲೂ ನಕ್ಕಿದ್ದು, ಹೇಳಿಕೆಯನ್ನು ಖಂಡಿಸುವ ಅಥವಾ ತಡೆಯುವ ಕೆಲಸ ಮಾಡಿಲ್ಲ. ಹೀಗಾಗಿ ಸಮುದಾಯವನ್ನು ತೇಜೋವಧೆ ಮಾಡಿದ ಭಗವಾನ್ ಅವರ ವಿರುದ್ಧ ಪೆÇಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಲಿ ಎಂದು ಆಗ್ರಹಿಸಿದರು.
ನಮ್ಮೋರು ನಮ್ಮೂರು ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್ ಗೌಡ ಮಾತನಾಡಿ, ಮಹಿಷ ದಸರೆ ಆಚರಣೆಗೆ ಯಾವುದೇ ಸಮುದಾಯ ಹಾಗೂ ಧರ್ಮದ ಭಾವನೆಗೆ ಧಕ್ಕೆ ತರಬಾರದೆಂಬ ಷರತ್ತು ಬದ್ಧ ಅನುಮತಿ ನೀಡಿದ್ದರು. ಇದಾಗಿಯೂ ನೇರವಾಗಿ ಕಾನೂನು ಉಲ್ಲಂಘನೆ ಮಾಡಿದ್ದರೆ. ಈ ಬಗ್ಗೆ ಪೆÇಲೀಸರು ಸ್ವಯಂ ಪ್ರೇರಿತ ಸುಮೋಟಾ ಪ್ರಕರಣ ದಾಖಲಿಸಲಿಲ್ಲ ಎಂಬ ಕಾರಣ ನಾವು ಹೋರಾಟ ಮಾಡಬೇಕಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಮುದಾಯಕ್ಕೆ ಇಂತಹ ಅಪಮಾನ ಎಂಬ ಕಪ್ಪು ಚುಕ್ಕೆ ಬರಬಾರದು ಎಂದರೆ ಕೂಡಲೇ ಪೆÇಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.
ಮಾಜಿ ನಗರಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ ಮಾತನಾಡಿ, ಈ ಹಿಂದೆಯೂ ಸಹ ಜನರ ಭಾವನೆಗೆ ಧಕ್ಕೆ ತರುವ ಆರೋಪ ಭಗವಾನ್ ಅವರ ಮೇಲಿದೆ. ಈ ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿದ್ದರೂ ಪೆÇಲೀಸರು ಬಂಧಿಸಿಲ್ಲ. ಸಮುದಾಯದ ತೇಜೋವಧೆ ಮಾಡುವ ಹೇಳಿಕೆ ನೀಡಿದ್ದರೂ ಪ್ರಕರಣ ದಾಖಲಿಸದಿರುವುದು ಖಂಡನೀಯ. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಭಗವಾನ್ ರನ್ನ ಬಹಿಷ್ಕರಿಸುವಂತೆ ಆಗ್ರಹ
ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದ ಪ್ರಚಾರ ಪಡೆಯುವ ಪ್ರಗತಿಪರ ಚಿಂತಕ ಎನಿಸಿಕೊಂಡಿರುವ ಪೆÇ್ರ.ಕೆ.ಎಸ್.ಭಗವಾನ್ ಅವರು ಮಹಿಷಾ ದಸರಾ ವೇದಿಕೆಯಲ್ಲಿ ಸಮುದಾಯದ ಬಗ್ಗೆ ಮಾತನಾಡಿರುವುದು ಖಂಡನೀಯ. ಈ ಹಿಂದೆಯೂ ಹಿಂದೂ ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡಿರುವ ಬಗ್ಗೆ ಈಗಾಗಲೇ ಕಾನೂನು ಪ್ರಕರಣ ಎದುರಿಸುತ್ತಿದ್ದಾರೆ. ಈಗ ಅನವಶ್ಯಕವಾಗಿ ಸಮುದಾಯದ ಬಗ್ಗೆ ಮಾತನಾಡಿರುವುದು ಅವರ ಮನಸ್ಥಿತಿ ಸರಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಹೀಗಾಗಿ ಸಾಹಿತ್ಯ, ಸಂಸ್ಕೃತಿ ಗೆ ಹೆಸರಾದ ಮೈಸೂರಿನ ಸಂಘಟನೆಗಳು ಮುಂದಿನ ದಿನಗಳಲ್ಲಿ ಇವರನ್ನು ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನಿಸದೇ ಅವರನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುತ್ತೇವೆ. ಇದಾಗಿಯೂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಕಂಡು ಬಂದರೆ ಅಂತಹ ಸಂಘಟನೆಯ ವಿರುದ್ದವೂ ಹೋರಾಟ ಮಾಡುವುದಾಗಿ ತಿಳಿಸುತ್ತಾ, ಸಮುದಾಯದ ಬಗ್ಗೆ ಕೇವಲವಾಗಿ ಮಾತನಾಡಿದ ಇಂತಹವರನ್ನು ಸ್ವಯಂ ಪ್ರೇರಿತರಾಗಿ ಸಮಾಜದಿಂದಲೇ ಹೊರಗಿಡಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಕಾಮಗಾರಿ ಸಮಿತಿ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್ ಒತ್ತಾಯಿಸಿದ್ದಾರೆ.
ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್, ನಿರ್ದೇಶಕರಾದ ಗಿರೀಶ್, ಉಮೇಶ್, ಎ.ರವಿ, ದಾಸನಕೊಪ್ಪಲು ಜಯರಾಂ, ಪ್ರತಾಪ, ಜಿಪಂ ಮಾಜಿ ಸದಸ್ಯ ಮಾದೇಗೌಡ, ಬಿಜೆಪಿ ಮುಖಂಅ ವಾಣೀಶ್ ಕುಮಾರ್, ಬಿಜೆಪಿ ಯುವಮೋರ್ಚ ಅಧ್ಯಕ್ಷ ಎಂ.ಜೆ.ಕಿರಣ್ ಗೌಡ, ವಕೀಲ ಹೇಮಂತ್ ಕುಮಾರ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಬೆಳವಾಡಿ ಶ್ರೀನಿವಾಸ್, ದಿ ಸಿಟಿ ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ವರೂಪ್, ಅಭಿಷೇಕ್ ಇನ್ನಿತರರು ಉಪಸ್ಥಿತರಿದ್ದರು.