ಕೆ.ಎಸ್.ಈಶ್ವರಪ್ಪ ಬೆನ್ನಿಗೆ ನಿಂತ ಬಿ.ಎಸ್.ವೈ

ಶಿವಮೊಗ್ಗ, ಫೆ. ೧೧: ಕೆ.ಎಸ್.ಈಶ‍್ವರಪ್ಪ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದವರು ಅಪಾರ್ಥ ಕಲ್ಪಿಸುತ್ತಿದ್ಧಾರೆ. ದೇಶದ್ರೋಹಿ ಹೇಳಿಕೆ ನೀಡುವವರ ವಿರುದ್ದ ಹೊಸ ಕಾನೂನು ತನ್ನಿ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ನವರು ಅವರ ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ಶಿವಮೊಗ್ಗ ನಗರದಲ್ಲಿ  ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಫ್ಐಆರ್ ಹಾಕಲಿ ತೊಂದರೆಯಿಲ್ಲ. ಆದರೆ ತಪ್ಪು ಕಲ್ಪನೆ ಮಾಡಿಕೊಂಡು ಎಫ್ಐಆರ್ ಹಾಕುವುದು ಸರಿಯಲ್ಲ. ಕಾನೂನು ಹೋರಾಟದಲ್ಲಿ ಈಶ್ವರಪ್ಪರಿಗೆ ಜಯ ದೊರಕಲಿದೆ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಸಿದ್ದರಾಮಯ್ಯ ಏನು ಬೇಕಾದರು ಹೇಳಿಕೆ ಕೊಡುತ್ತಾರೆ. ದೆಹಲಿಗೆ ಶಾಸಕರನ್ನು ಕರೆದುಕೊಂಡು ಹೋಗಿ ರಾಜಕೀಯ ದೊಂಬರಾಟ ಮಾಡುವ ಅವಶ್ಯಕತೆ ಇರಲಿಲ್ಲ. ಈ ನಡವಳಿಕೆಯನ್ನ ಖಂಡಿಸುತ್ತೆನೆ. ಸಿದ್ದರಾಮಯ್ಯ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ತಾವು ಹೇಳಿದ್ದೆ ಸರಿ ಎನ್ನುವ ಜಾಯಮಾನದವರು ಎಂದರು.