ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಲು ಮನವಿ

ದಾವಣಗೆರೆ.ನ.೨೧; ನೂತನವಾಗಿ ನಿರ್ಮಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾ ಸಂಚಾಲಕ ಕುಂದುವಾಡ  ಮಂಜುನಾಥ್ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  ಅಂಬೇಡ್ಕರ್ ಅವರು ದಲಿತ ಹಾಗೂ ಶೋಷಿತ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇಶಕ್ಕೆ ಸಂವಿಧಾನದ ಮೂಲಕ, ಸರ್ವರಿಗೂ ಸಮಬಾಳು ಹಾಗೂ ಸಮಪಾಲು ನೀಡಿದ್ದಾರೆ  ಆದ್ದರಿಂದ  ದಾವಣಗೆರೆ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್‌ ನಿಲ್ದಾಣಕ್ಕೆ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಬಸ್‌ ನಿಲ್ದಾಣ’ ಎಂದು ನಾಮಕಾರಣ ಮಾಡಬೇಕು ಜಿಲ್ಲಾದ್ಯಂತ ಇರುವ ಲಕ್ಷಾಂತರ ಅನುಯಾಯಿಗಳ ಕನಸನ್ನು ನನಸು ಮಾಡಬೇಕೆಂದು ಒತ್ತಾಯಿಸಿದರು.ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನಿಸಿರುವ ಪ್ರೊ ಬಿ ಕೃಷ್ಣಪ್ಪನವರು  ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸ್ಥಾಪಿಸಿ, ರಾಜ್ಯಾದ್ಯಂತ ಪ್ರತಿಯೊಂದು ಹಳ್ಳಿಗಳ ಶಾಖೆಗಳನ್ನು ಸ್ಥಾಪಿಸುವ ಮುಖಾಂತರ ನೊಂದವರಿಗೆ ಬಡವರಿಗೆ  ಅನ್ಯಾಯಕ್ಕೊಳಗಾದವರಿಗೆ ಹೋರಾಟದ ಮೂಲಕ ಸಾಮಾಜಿಕ ನ್ಯಾಯಾವನ್ನು ಕೊಡಿಸಿ,ಕರ್ನಾಟಕದ ಅಂಬೇಡ್ಕರ್ ಎಂದು ಹೆಸರನ್ನು ಪಡೆದ ಏಕೈಕ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಕೃಷ್ಣಪ್ಪ ಅವರಿಗೆ ಮರಣೋತ್ತರವಾಗಿ- ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ವಿಜಯಲಕ್ಷ್ಮಿ, ಪ್ರದೀಪ್ ಕೆ.ಜೆಮಂಜುನಾಥ, ಸಿದ್ಧರಾಮಪ್ಪ,  ತಿಪ್ಪೇಶ್‌, ರಾಜು‌ ಸೇರಿದಂತೆ ಹಲವರಿದ್ದರು.