ಕೆ.ಎಸ್.ಆರ್.ಟಿ.ಸಿ. ನೌಕರರ ವಿವಿಧ ಬೇಡಿಕೆ ಈಡೇರಿಸಲು ರೈತಪರ ಸಂಘಟನೆಗಳಿಂದ ಮನವಿ

ವಿಜಯಪುರ, ಎ.20-ಕೆ.ಎಸ್.ಆರ್.ಟಿ.ಸಿ. (ಸಾರಿಗೆ) ನೌಕರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಳೆದ 13 ದಿನಗಳಿಂದ ಸಾರಿಗೆ ನೌಕರರು ನಿರಂತರವಾಗಿ ಅನಿರ್ಧಿμÁ್ಟವಧಿ ಮುಷ್ಕರ ನಡೆಸುತ್ತಿದ್ದರು ಕೂಡಾ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಕಿಂಚಿತ್ತೂ ಗಮನಹರಿಸುತ್ತಿಲ್ಲ. ಮೇಲಾಗಿ ಉಡಾಫೆಯ ಉತ್ತರಗಳನ್ನು ಕೂಡುತ್ತಾ ಬಂದಿದ್ದಾರೆ.ಈ ಮೊದಲು ದಿನಾಂಕ: 13/12/2020 ರಂದು ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆಗ ಸಾರಿಗೆ ನೌಕರರ ಬೇಡಿಕೆಗಳನ್ನು 3 ತಿಂಗಳ ಅವಧಿಯಲ್ಲಿ ಬಗೆಹರಿಸುವುದಾಗ ಸರಕಾರ ಭರವಸೆ ನೀಡಿತ್ತು. ಆದರೀಗೆ ಅದರ ಬಗ್ಗೆ ಸೌಜನ್ಯಕ್ಕೂ ಸರಕಾರ ಮಾತನಾಡುತ್ತಿಲ್ಲ. ಮೇಲಾಗಿ ಸಾರಿಗೆ ನೌಕರರ ಪ್ರಮುಖ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ದಿನಾಂಕ: 13-12-2020 ರಂದು ವಿಕಾಸಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಾರಿಗೆ ಸಚಿವರು ಭರವಸೆ ನೀಡಿದ್ದರು.
ಈ 9 ಬೇಡಿಕೆಗಳನ್ನು ಈಡೇರಿಸುವಲ್ಲಿಯೂ ಸಾರಿಗೆ ಸಚಿವರು ಎಡವಿದ್ದಾರೆ. ಸರಕಾರದ ಅಸಡ್ಡೆತನದಿಂದಾಗಿ ರಾಜ್ಯದಲ್ಲಿ ಕಳೆದ 13 ದಿನಗಳಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ವಿನಃಸಾರಿಗೆ ನೌಕರರಿಂದಲ್ಲ, ಸಾರಿಗೆ ಸಂಸ್ಥೆಗಳು ನೌಕರರ ಮುಷ್ಕರಿಂದ ನಷ್ಟಕ್ಕೊಳಗಾಗಿವೆ ಎಂದು ಸರಕಾರ ಹೇಳುತ್ತಿದ್ದು, ಇದಕ್ಕೆ ನೌಕರರು ಹೋಣೆಗಾರರಲ್ಲ. ಬದಲಾಗಿ ಸಂಸ್ಥೆಗಳ ಆದಾಯಕ್ಕೆ ಹೊಡೆತ ಬಿಳುವಲ್ಲಿ ಸರಕಾರವೇ ನೇರ ಹೊಣೆಯಾಗಿದೆ. ನ್ಯಾಯಸಮ್ಮತವಾಗಿರುವ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಮನಸ್ಸಿಲ್ಲ. ಹೀಗಾಗಿಯೇ ಸಾರಿಗೆ ನೌಕರರನ್ನು ಮೊದಲಿನಿಂದಲೂ ಜೀತುದಾಳುಗಳ ರೀತಿ ಸರಕಾರ ನೋಡುತ್ತಿದೆ. ಮೇಲಾಗಿ ಹಗಲು-ರಾತ್ರಿ ಎನ್ನದೇ ಸಾರಿಗೆ ನೌಕರರನ್ನು ದಿನದ 24 ಗಂಟೆ ದುಡಿಸಿಕೊಂಡು ಅವರ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುವ ಮೂಲಕ ಸರಕಾರ ಮೊಂಡುತನ ಪ್ರದರ್ಶಿಸುತ್ತಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರಾಹುಲ ಕುಬಕಡ್ಡಿ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ಸರಕಾರ ಕೊಡುವ ಮಡಿಗಾಸಿನ ಸಂಬಳದಲ್ಲಿ ಹೆಂಡ್ತಿ ಮಕ್ಕಳನ್ನು ಸಲುವುದು ಸಾರಿಗೆ ನೌಕರರಿಗೆ ಅಸಾಧ್ಯದ ಮಾತಾಗಿದೆ. ಏಕೆಂದರೆ, ಸರಕಾರ ಕೊಡುವ ಸಂಬಳವು ಮನೆ ಬಾಡಿಗೆ, ಒಪ್ಪತ್ತಿನ ಊಟಕ್ಕೂ ಸಾಲುತ್ತಿಲ್ಲ. ಹೀಗಿರುವಾಗ ಮಕ್ಕಳ ಶಿಕ್ಷಣ, ಆರೋಗ್ಯ, ತಂದೆ-ತಾಯಿಗಳನ್ನು ಸಲುವುದಾದರೂ ಹೇಗೆ? ಮಾರ್ಚ ತಿಂಗಳಿನ ಸಂಬಳವನ್ನು ಸರಕಾರ ನೀಡದ ಹಿನ್ನೆಲೆ ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬವಾಗಿರುವ ಯುಗಾದಿಯನ್ನು ಸಾರಿಗೆ ನೌಕರರ ಕುಟುಂಬಗಳು ಆಚರಿಸಲಿಲ್ಲ. ಕಾರಣ ನ್ಯಾಯಸಮ್ಮತವಾಗಿರುವ ಸಾರಿಗೆ ನೌಕರರ ಬೇಡಿಕೆಗಳನ್ನು ಆದಷ್ಟು ಬೇಗ ಬಗೆಹರಿಸಲು ಮಾನ್ಯ ಮುಖ್ಯಮಂತ್ರಿಗಳು ಮುಂದಾಗಬೇಕೆಂದು ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮೀಬಾಯಿ ಹಿಪ್ಪರಗಿ, ಶೋಭಾ ನಂದಿಕೋಲ, ದಾನಮ್ಮ ತೆಗ್ಗಳ್ಳಿ, ಲಕ್ಷ್ಮೀಬಾಯಿ ಗವಿಮಠ, ಸಂತೋಷ ಹಂಗರಗಿ, ಕೃಷ್ಣಾ ಬೊಂದ್ರೆ, ಸಂತೋಷ ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.