ಕೆ.ಎಸ್.ಆರ್.ಟಿಸಿಯ ನಿವೃತ್ತ ಅಧಿಕಾರಿಗಳೀಂದ ಒಂದು ಅಪೂರ್ವವಾದ ನೇತ್ರದಾನ

ವಿಜಯಪುರ, ಜು.21-ಇಂದಿನ ದಿನಮಾನಗಳಲ್ಲಿÀ ಹಿರಿಯರಿಗೆ ತನ್ನ ಮನೆಯಲ್ಲಿಯೇ ಕಡೆಗಣಿಸುತ್ತಿರುವಾಗ, ಸಂಸ್ಥೆಯ ನಿವೃತ್ತರೆಲ್ಲರೂ ಸಂಘ ಮಾಡಿಕೊಂಡು ಸಮಾಜಮುಖಿಯಾಗಿ, ಸಂಘದ 75 ವರ್ಷ ಪೂರೈಸಿದ ಆಜೀವ ಸದಸ್ಯರಿಗೆ ಆಯುಷ್ಮಾನ್ ಅಂತಾ ವಿಜೃಂಭಣೆಯಿಂದ ಸನ್ಮಾನಿಸಿ ಆದರಿಸುವುದು, ಒಂದು ಅದ್ಭುತ ಹಾಗೂ ಅಪೂರ್ವವಾದ ಮಾನವೀಯತೆ ಬಿಂಬಿಸುವ, ಇಂದಿನ ಯುವ ಪೀಳಿಗೆಗೆ ಹಿರಿಯರಿಗೆ ಗೌರವಿಸುವ ಪಾಠ ಹೇಳುವಂತಿರುವ ಈ ಕಾರ್ಯಕ್ರಮ ಅದ್ಭುತವಾಗಿದೆ ಎಂದು ನಿವೃತ್ತ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಶ್ರೀ ಧನ್ಯಕುಮಾರ ಕಿವಡೆ ಹೇಳಿದರು.
ವಿಜಯಪುರ ನಗರದ ಸೋಲಾಪುರ ರಸ್ತೆ ಶುಭಶ್ರೀ ಹೊಟೇಲ್ ಸಭಾಂಗಣದಲ್ಲಿ ಜು. 17 ರಂದು ಕೆ.ಎಸ್.ಆರ್.ಟಿಸಿ ನಿವೃತ್ತ ಅಧಿಕಾರಿಗಳ ಮತ್ತು ಮೇಲ್ವಿಚಾರಕರ ಸಂಘ (ನ್ಯಾಮ್ಸ್)ದ ವತಿಯಿಂದ, ಬಿ.ಸಿ.ರಮೇಶ ಅವರ ನೇತ್ರದಾನದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡÀ ಒಂದು ಅಪೂರ್ವವಾದ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನೇತ್ರದಾನ ಶ್ರೇಷ್ಠದಾನ ಇಂಥಾ ದಾನಿಗಳನ್ನು ಸಂಘದ ಸದಸ್ಯರಲ್ಲಿ ಗುರುತಿಸಿ ನೋದಂಣಿ ಮಾಡಿಸಿ ಸನ್ಮಾನ ಮಾಡುವದು ಇನ್ನೊಂದು ಅದ್ಭುತ ಎಂದು ವಿಜಯಪುರದ ಶ್ರೀ ಪ್ರಭುಗೌಡ ಪಾಟೀಲರ ಅನುಗ್ರಹ ಕಣ್ಣಿನ ಆಸ್ಪತ್ರೆಯಿಂದ ಆಗಮಿಸಿದ ವೈದ್ಯೆ ಡಾ.ರಷ್ಮಿಯವರು ಮಾತನಾಡಿದರು.
ಅಲ್ಲದೆ ಈ ಸಮಾರಂಭದಲ್ಲಿ ಸಂಘದ ಸದಸ್ಯರಾದ ಜಿ.ಎಸ್. ದೇಗಿನಾಳ ಮಾತನಾಡಿ, ದೇಹ ದಾನ ಮಾಡುವ ನೋಂದಣಿ ವಾಗ್ದಾನ ಘೋಷಣೆ ಮಾಡಿ ಇತ್ತಿಚೆಗೆ ತಮ್ಮ ಹಿರಿಯ ಸಹೋದರ ಎಸ್.ಎಸ್.ದೇಗಿನಾಳ ನಿವೃತ್ತ ಅಧಿಕಾರಿ ನಿಧನರಾದಾಗ ಅವರು ಮೊದಲೇ ಮಾಡಿದ ವಾಗ್ದಾನದಂತೆ ನಗರದ ಬಿ.ಎಲ್.ಡಿ.ಇ ಆಸ್ಪತ್ರೆ ಪವಿತ್ರ ದೇಹ ನೀಡಲಾಯಿತೆಂದು ಹೇಳಿದರು.
ನಾರಾಯಣರಾವ್ ಆರ್. ಬಾಗಲಕೋಟ, ಧನ್ಯಕುಮಾರ ಕಿವಡೆ, ಪುರಾಣಿಕ ಮಠ, ವ್ಹಿ.ಎಸ್. ಪಾಟೀಲ, ಎಂ.ವ್ಹಿ.ಸಿಂದಗಿ, ಎಂ.ಆರ್. ಗುಂದಗಿ, ಪಿ.ಹೆಚ್. ಡಾಣಕ ಶಿರೂರ ಅವರನ್ನು ಆಯುಷ್ಮಾನ ಸನ್ಮಾನ ಸ್ವೀಕರಿಸಿದರು. ಪಿ.ಎಸ್. ಆಲಗೊಂಡ, ವಿಜಯಕುಮಾರ ಬಡಿಗೇರ್, ಅನಂತ ನಾ.ಬಾಗಲಕೋಟ, ಎ.ಬಿ.ಪಾಟೀಲ ಅವರು ನೇತ್ರದಾನ ನೋಂದಣಿ ಮಾಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನ್ಯಾಮ್ಸ್ ಸಂಘದ ಅಧ್ಯಕ್ಷರಾದ ಸುಭಾಷಚಂದ್ರ ಹೊಳಲ ಮಾತನಾಡಿ, ನಾವೆಲ್ಲ ನಿವೃತ್ತರಾಗಿ ಮನೆಯಲ್ಲಿ ಸುಮ್ಮನೆ ಕೂರದೇ ಸಹೃದಯಿಗಳ ಸಂಘ ಮಾಡಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಕೊಳ್ಳುತ್ತಿದ್ದೇವೆ. ಹಾಗೂ ನಾವು ಹಿಂದೆ ಸೇವೆ ಸಲ್ಲಿಸಿದ ಸಂಸ್ಥೆಯ ಅಭಿವೃದ್ಧಿ ಕುರಿತು ಚಿಂತಿಸುತ್ತಾ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾರ್ಯ ಹಾಗೂ ಪ್ರಯಾಣಿಕರಿಗೆ ಸಂಸ್ಥೆಯ ಬಸ್‍ಗಳಲ್ಲಿಯೇ ಪ್ರಯಾಣಿಸಲು ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳಾದ 80 ವರ್ಷದ ಹಿರಿಯರಾದ ರಮೇಶ, ಶಿರೇಶಿ, ನಮಾಜಿ, ಬದ್ದಿ, ದೊಡ್ಡಗೌಡರ, ಪತ್ತಾರ, ಬಾರದ, ಸುಖಸಾರೆ, ಹಳ್ಳಿ, ಎಂ.ಎಚ್.ಪತ್ತಾರ, ಹುಲ್ಯಾಳ, ಎಸ್.ಎಂ.ಮಠ, ನಾಗೇಶ, ಶಿವಶರಣಪ್ಪಾ, ವಸಂತ, ಜೋಗೂರ, ವಾಲಗದ, ಈಸಾರೆಡ್ಡಿ, ಗಣಪತಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ, ಕಲಬುರ್ಗಿ, ವಿಜಯಪುರ, ಬಾಗಲಕೋಟ, ಜಮಖಂಡಿ, ಅಥಣಿ, ಹಾವೇರಿ, ದಾವಣಗೇರಿ, ಬಳ್ಳಾರಿಗಳಿಂದ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ 99 ವರ್ಷದ ಹಿರಿಯರಾದ ಎ.ಎಸ್.ಕುಲಕರ್ಣಿ ಆಗಮಿಸಿದ್ದರು. ಶಾಂತಿನಾಥ ಪಾಟೀಲ ಸ್ವಾಗತಿಸಿದರು. ಮುಂಡರಗಿ ವಂದಿಸಿದರು.