ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಬುದ್ಧ ಪೂರ್ಣಿಮೆ ಆಚರಣೆ

ಕಲಬುರಗಿ:ಮೇ.26: ಆಸೆಯೇ ದುಃಖಕ್ಕೆ ಮೂಲ ಎಂದು ಜಗತ್ತಿಗೆ ಸಾರಿದ ಭಗವಾನ್ ಬುದ್ಧನ ಜನ್ಮದಿನವನ್ನು ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ‌ ಬಡಾವಣೆಯಲ್ಲಿ ವೈಶಾಖ ಬುದ್ಧ ಪೂರ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

ಬುಧವಾರ ಆಯೋಜಿಸಿದ್ದ ಬುದ್ಧ ಪೂರ್ಣಿಮೆ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಚ್.ಬಿ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಬುದ್ಧನ ಸಂದೇಶ, ಬೋಧನೆ ಮತ್ತು ಜೀವನ ಜಗತ್ತಿನಾದ್ಯಂತ ನಿರಂತರವಾಗಿ ಜನರ ಬದುಕನ್ನು ಶ್ರೀಮಂತಗೊಳಿಸಿದೆ. ಬುದ್ಧ ಬರಿ ಒಂದು ಹೆಸರಲ್ಲ, ಅವರೊಂದು ಪವಿತ್ರ ಚಿಂತನೆ, ಆ ಚಿಂತನೆ ಪ್ರತಿಯೊಬ್ಬ ಮನುಷ್ಯರ ಹೃದಯವನ್ನು ಮೀಟುತ್ತದೆ ಮತ್ತು ಮಾನವೀಯತೆಯ ಮಾರ್ಗದರ್ಶನ ತೋರುತ್ತದೆ. ಬುದ್ಧ, ಪ್ರೀತಿ ಮತ್ತು ಅಹಿಂಸೆಯ ಶಕ್ತಿಯನ್ನು ನಮಗೆ ತೋರಿದರು. ಬುದ್ಧ ಇಡೀ ವಿಶ್ವಕ್ಕೆ ಅಹಿಂಸೆಯನ್ನು ಬೋಧಿಸಿದರು. ಅದೇ ಜ್ಞಾನದ ಭಾಷೆಯಾಯಿತು ಎಂದರು. ಶಿವಕಾಂತ ಚಿಮ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿರೇಶ ಬೋಳಶೆಟ್ಟಿ ನರೋಣಾ ಸ್ವಾಗತಿಸಿದರು.

ಸಮಾರಂಭದಲ್ಲಿ ಸಂಗಮೇಶ್ವರ ಸರಡಗಿ, ನಾಗೆಂದ್ರಪ್ಪ ದಂಡೋತಿಕರ, ರವೀಂದ್ರ ಕಟ್ಟಿಮನಿ, ಉಮಾಕಾಂತ ಟೈಗರ್, ಡಿ.ಆರ್. ಕುಲಕರ್ಣಿ, ವಿನೋದ ಪಡನೂರ, ಶಿವಪ್ಪ ಕಟ್ಟಿಮನಿ ಸುಲ್ತಾನಪುರ, ಪಾಂಡುರಂಗ ಕಟ್ಕೆ, ಕಲ್ಯಾಣರಾವ, ರಾಜಶೇಖರ ಜಕ್ಕಾ, ಈರಯ್ಯಸ್ವಾಮಿ ಹಿರೇಮಠ, ರಾಮದಾಸ್ ಪಾಟೀಲ, ಪುಂಡಲೀಕ ಜಮಾದಾರ, ಬಸವರಾಜ ತಂಗಾನೂರ, ಶ್ರೀಮತಿ ಸುನಂದಾ ಕಾಂಬ್ಳೆ, ಡಾ. ಗೌತಮ ಕಾಂಬ್ಳೆ, ಬಸವರಾಜ ಹೆಳವರ ಯಾಳಗಿ, ಅಮೃತ ನಾಯ್ಕ ಮತ್ತು ಇನ್ನಿತರರಿದ್ದರು.