ಕೆ.ಇರಬಗೇರಾ ಗ್ರಾಪಂನಲ್ಲಿ ೧೮ ಕೋಟಿ ಅವ್ಯವಹಾರ:ತನಿಖೆಗೆ ಒತ್ತಾಯ

ಗಬ್ಬೂರು:-೨೦೧೮ ರಿಂದ -೨೦೨೨ ನೇ ಸಾಲಿನವರೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಟ್ಟಿ ಬಿಲ್ ಸೃಷ್ಟಿಸಿ ಸರಕಾರದ ೧೮ ಕೋಟಿ ಹಣವನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಅಧ್ಯಕ್ಷರು ಲಪಾಟಿಸಿದ್ದಾರೆ.
ಈ ಕುರಿತು ತನಿಖೆ ನಡೆಸಬೇಕು ಎಂದು ದೇವದುರ್ಗ ತಾಲೂಕಿನ ಕೆ.ಇರಬಗೇರಾ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೆ.ಇರಬಗೇರಾ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾದ ಪತ್ತೆಪ್ಪ ರಾಥೋಡ್,ಕಂಪ್ಯೂಟರ್ ಆಪರೇಟರ್,ಜನಪ್ರತಿನಿಧಿಗಳು ಉದ್ಯೋಗ ಖಾತ್ರಿಯಲ್ಲಿ ಬೋಗಸ್ ಬಿಲ್ ಎತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರತಿವರ್ಷ ಗ್ರಾಪಂನಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಉದ್ಯೋಗ ಖಾತ್ರಿ ಕ್ರಿಯಾ ಯೋಜನೆಯನ್ನು ಒಂದೇ ಹೊಲ,ಒಂದೇ ಸರ್ವೆ ನಂಬರಿಗೆ ಸೀಮಿತಗೊಳಿಸಿ ಕಾಮಗಾರಿ ಮಾಡಿ ಅನುದಾನ ಎತ್ತಿದ್ದಾರೆ.ಜಾಬ್ ಕಾರ್ಡ್ ಇರುವವರು ಬಾಂಬೆ,ಪೂನಾ,ಬೆಂಗಳೂರಿನ ಮಹಾನಗರ ಕಡೆಗೆ ಕೆಲಸ ಹರಿಸಿ ಹೋಗಿದ್ದಾರೆ.ಗುತ್ತಿಗೆದಾರರು,ದಲ್ಲಾಳಿಗಳು ಅವರನ್ನು ಕರೆಯಿಸಿ ಹಣ ಬ್ಯಾಂಕಿನಿಂದ ಬಿಡಿಸಿಕೊಳ್ಳುತ್ತಾರೆ.ಇಲ್ಲವೆ ಆಪ್‌ಗಳ ಮೂಲಕ ಖಾತೆಗೆ ಬಿದ್ದ ಹಣ ಹಾಕಿಸಿಕೊಳ್ಳುತ್ತಾರೆ.ಮಾನವ ಕೂಲಿ ಮಾಡದೇ ಯಂತ್ರಗಳನ್ನು ಕೆಲಸಕ್ಕೆ ಬಳಸುತ್ತಾರೆ ಎಂದು ಆರೋಪಿಸಿದ್ದಾರೆ.
ಕ್ರಿಮಿನಲ್ ಮೊಕದ್ದಮೆ ದಾಖಲಿಸಿ:ತಾಲೂಕು ಪಂಚಾಯತಿ ಅಧಿಕಾರಿ,ಉದ್ಯೋಗ ಖಾತ್ರಿ ಅಭಿಯಂತರರು, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು,ಅಕ್ರಮದಲ್ಲಿ ಪಾಲ್ಗೊಂಡಿರುವವರ ವಿರುದ್ಧ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಸರಕಾರದ ಹಣ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ೧೪-೧೫ನೇ ಹಣಕಾಸು ಮತ್ತು ಉದ್ಯೋಗ ಖಾತ್ರಿ ಯೋಜನೆ,ಬಿಆರ್ ಜಿಎಫ್,ಬಸವ ವಸತಿ,ಇಂದಿರಾ ವಸತಿ,ರಾಜೀವ್ ಗಾಂಧಿ ವಸತಿ ಅಲೆಮಾರಿ ಜನಗಳ ಆಶ್ರಯ ಯೋಜನೆಯಲ್ಲೂ ಕೂಡ ಭಾರೀ ಅವ್ಯವಹಾರ ನಡೆದಿದೆ.ಮುಂಗಡವಾಗಿ ೨೦ ಸಾವಿರ ನೀಡಿದವರಿಗೆ ಮನೆ ಮಂಜೂರು ಮಾಡಿದ್ದಾರೆ,ಇದರಲ್ಲಿ ಮನೆ ಮತ್ತೆ ಮಂಜೂರು ಮಾಡಲಾಗಿದೆ ಎಂದು ಮನವಿ ಪತ್ರದಲಿ ಗ್ರಾಮಸ್ಥರಾದ ಹನುಮಂತ್ರಾಯ ಎಚ್ಚರಿಸಿದರು.