ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಶಾಲೆ ಪುನರಾರಂಭ

ಕೆ.ಆರ್.ಪೇಟೆ, ನ.19: ಮುಚ್ಚಿದ್ದ ಸರ್ಕಾರಿ ಶಾಲೆಯನ್ನು ಪುನರಾರಂಭ ಮಾಡಿದ ಅಧಿಕಾರಿಗಳು ಮತ್ತು ಗ್ರಾಮಸ್ಥರು.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ಸುಮರು ಎರಡು ವರ್ಷಗಳಿಂದ ಮಕ್ಕಳ ಹಾಜರಾತಿಯ ಕೊರತೆಯಿಂದ ಮುಚ್ಚಲ್ಪಟ್ಟಿದ್ದ ಸರ್ಕಾರಿ ಶಾಲೆಯನ್ನು ಇಂದು ಅಧೀಕೃತವಾಗಿ ಪ್ರಾರಂಭ ಮಾಡಲಾಯಿತು.
ಕೊರೋನಾ ಮಹಾಮಾರಿಯ ಆರ್ಭಟದ ನಡುವೆ ಸಾಲೆಗಳು ಪ್ರಾರಂಭವಾಗದೇ ಖಾಸಗೀ ಶಾಲೆಗಳ ಹಣದ ಬೇಡಿಕೆಗಳನ್ನು ಪೂರೈಸಲಾಸಗದೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪೋಷಕರು ತಮ್ಮದೇ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಮಕ್ಕಳ ಕೊರತೆಯಿಂದಾಗಿ ಮುಚ್ಚಿದ್ದ ಶಾಲೆಯನ್ನು ಮರು ಪ್ರಾರಂಭಿಸಬೇಕೆಂಬ ಅಭಿಲಾಷೆಯಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು, ಇದರ ಪರಿಣಾಮದಿಂದಾಗಿ ಶಿಕ್ಷಕರು, ಸಿಆರ್.ಪಿ, ಶಿಕ್ಷಣ ಸಂಯೋಜಕರು , ಕ್ಷೇತ್ರ ಸಮನ್ವಯಾಧಿಕಾರಿ, ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಇಚ್ಚಾಶಕ್ತಿಯಿಂದಾಗಿ ಮನೆಮನೆಗೆ ತೆರಳಿ ಪೋಷಕರ ಮನವೊಲಿಸಿದರು. ಇದರಿಂದಾಗಿ ಶಾಲೆಗೆ ಹದಿನಾಲ್ಕು ಮಕ್ಕಳು ದಾಖಲಾದರು, ಇಂದು ಗ್ರಾಮದ ಮುಖಂಡರುಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಾಲೆಗೆ ತಳಿರುತೋರಣ, ಸುಣ್ಣ, ಬಣ್ಣ, ಸೇರಿದಂತೆ ಶಾಲೆಯನ್ನು ಸಿಂಗರಿಸಿ ಅಧೀಕೃತವಾಗಿ ಮಕ್ಕಳಿಗೆ ಗುಲಾಬಿ ಹೂವನ್ನು ನೀಡಿ ಶಾಲೆಗೆ ಬರಮಾಡಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ಖಾಸಗೀ ಶಾಲೆಗಳ ಪೈಪೋಟಿಯಿಂದಾಗಿ ಸರ್ಕಾರಿ ಶಾಲೆಗಳು ಹಾಜರಾತಿಯನ್ನು ಗಣನೀಯ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿವೆ, ಕೊರೋನಾ ಮಹಾಮಾರಿಯಿಂದಾಗಿ ಸಾಮಾನ್ಯ ವರ್ಗದ ಜನರಿಗೆ ಬದುಕು ಕಟ್ಟಿಕೊಳಲುವುದು ದುಸ್ತರವಾಗಿದೆ, ಇಂಥಃ ಸಂಕಷ್ಟದ ಸಮುದಲ್ಲಿ ಸರ್ಕಾರz ಪ್ರೋತ್ಸಾಹದಾಯಕ ಯೋಜನೆಗಳಾದ ಉಚಿತ ಪಠ್ಯಪುಸ್ತಕ, ಉಚಿತ ಸಮವಸ್ತ್ರ, ಉಚಿತ ಬಿಸಿಯೂಟ, ಉಚಿತ ಶೂ, ಸೇರಿದಂತೆ ಹಲವು ಯೋಜನೆಗಳು ಜನಸಾಮಾನ್ಯರ ಆರ್ಥಿಕ ಸಂಕಷ್ಟವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ. ಪ್ರತೀ ವರ್ಷ ಲಕ್ಷಾಂತರ ರೂಪಾಯಿಗಳನ್ನು ವಂತಿಕೆಯಾಗಿ ವಸೂಲಿ ಮಾಡುವ ಖಾಸಗೀ ಶಾಲೆಗಳಿಗೆ ಕೊರೋನಾ ತಕ್ಕ ಪಾಠ ಕಲಿಸಿದೆ. ಗ್ರಾಮದ ಮುಖಂಡರುಗಳು ಸೂಕ್ತ ಸಮಯದಲ್ಲಿ ಒಳ್ಳೆಯ ತೀರ್ಮಾನ ಕೈಗೊಂಡಿರುವುದು ತುಂಬಾ ಸಂತೋಷದಾಯಕವಾಗಿದ್ದು ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರತಿಭಾವಂತರಾಗಿದ್ದು ಅಪಾರ ಅನುಭವ, ಸೂಕ್ತ ತರಬೇತಿ ಹೊಂದಿರುತ್ತಾರೆ ಅವರುಗಳ ಕೈಗೆ ನಿಮ್ಮ ಮಕ್ಕಳನ್ನು ನೀಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.
ಶಾಲೆಗೆ ಆಗಮಿಸಿದ್ದ ಎಲ್ಲಾ ಹದಿನಾಲ್ಕು ಮಕ್ಕಳಿಗೂ ದಮ್ಮನಿಂಗಲ ಗ್ರಾಮದ ನಿವೃತ್ತ ಶಿಕ್ಷಕ ರಾಜ್ ಬಾನು ರವರು ಉಚಿತವಾಗಿ ನೋಟ್ ಬುಕ್, ಪೆನ್, ಪೆನ್ಸಿಲ್, ಗಳನ್ನು ನೀಡಿ ಶುಭ ಹಾರೈಸಿದರು, ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು,
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಶಿಕ್ಷಣ ಸಂಯೋಜಕರುಗಳಾದ ಮೋಹನ್ ಕುಮಾರ್, ವೇಣುಗೋಪಾಲ್, ಸೋಮಶೇಖರ್, ಸಿ.ಆರ್.ಪಿ.ಗಳಾದ ದೊರೆಸ್ವಾಮಿ, ರಾಮಚಂದ್ರ. ಗ್ರಾಮದ ಮುಖಂಡರುಗಳಾದ ಪುಟ್ಟರಾಜೇಗೌಡ, ನಿಂಗರಾಜೇಗೌಡ, ಶಾರದಮ್ಮ, ಕುಮಾರ್, ಸೇರಿದಂತೆ ಮಕ್ಕಳ ಪೋಷಕರು, ಗ್ರಾಮಸ್ಥರು ಹಾಜರಿದ್ದರು.
ಚಿತ್ರಶೀರ್ಷಿಕೆ;18 ಕೆ.ಆರ್.ಪಿ. 02; ಕಳೆದ ಎರಡು ವರ್ಷದ ಹಿಂದೆ ಮುಚ್ಚಿದ್ದ ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದ ಸರ್ಕಾರಿ ಶಾಲೆಯನ್ನು ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ಪ್ರಾರಂಭಿಸಿ ಮಾತನಾಡಿದರು.