ಕೆ.ಆರ್. ಪುರ ತಹಸೀಲ್ದಾರ್ ಅಜಿತ್ ರೈ ಬಳಿ ಬಗೆದಷ್ಟು ಹಣ,ಚಿನ್ನ,ಕಾರು,ಲಿಕ್ಕರ್

ಬೆಂಗಳೂರು,ಜೂ.೨೮-ಲೋಕಾಯುಕ್ತರ ಬಲೆಗೆ ಬಿದ್ದಿರುವ ಕೆ.ಆರ್ ಪುರ ತಹಸೀಲ್ದಾರ್ ಅಜಿತ್ ರೈ ಅವರ ಮನೆಯಲ್ಲಿ ದೊರೆತ ಕಂತೆ ಕಂತೆ ಹಣ, ಚಿನ್ನಾಭರಣ ಸಹಿತ ಸಂಪತ್ತು ನೋಡಿ ಸ್ವತಃ ಅಧಿಕಾರಿಗಳೇ ದಂಗಾಗಿದ್ದಾರೆ.ತಹಸೀಲ್ದಾರ್ ಇಷ್ಟೆಲ್ಲ ದುಡ್ಡು, ಬಂಗಲೆ, ಆಸ್ತಿ ಮಾಡಬಹುದಾ ಎನ್ನುವ ಪ್ರಶ್ನೆ ಅವರ ಬಳಿ ದೊರೆತ ಅಪಾರ ಸಂಪತ್ತಿನಿಂದ ಉದ್ಭವವಾಗುತ್ತದೆ.
ಅಜಿತ್ ರೈ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸೊರಕೆಯವರು. ಅವರ ತಂದೆ ಆನಂದ ರೈ ಆವರು ಪುತ್ತೂರಿನಲ್ಲಿ ಸರ್ವೇಯರ್ ಆಗಿದ್ದರು. ಅವರು ಕರ್ತವ್ಯದಲ್ಲಿದ್ದಾಗಲೇ ನಿಧನರಾದ ಹಿನ್ನೆಲೆಯಲ್ಲಿ ಅಜಿತ್ ರೈಗೆ ಸರ್ಕಾರಿ ಉದ್ಯೋಗ ಸಿಕ್ಕಿತ್ತು.ಅದನ್ನೇ ಮೆಟ್ಟಿಲಾಗಿ ಮಾಡಿಕೊಂಡು ತಹಸೀಲ್ದಾರ್ ಹುದ್ದೆಯರೆಗೆ ಏರಿ ಬಂದ ಅಜಿತ್ ರೈ ಅವರು ಈಗ ಹೊಂದಿರುವ ಆಸ್ತಿ ನೋಡಿದರೆ? ಅಬ್ಬಬ್ಬಾ ಅನಿಸದೆ ಇರಲಾರದು.ನಿಜವೆಂದರೆ, ಈಗ ಅಜಿತ್ ರೈ ಕೆ.ಆರ್. ಪುರ ತಹಸೀಲ್ದಾರ್ ಆಗಿಲ್ಲ. ಅವರ ಅಕ್ರಮಗಳ ವಾಸನೆ ಹಿಡಿದ ಸರ್ಕಾರ ಅವರನ್ನು ಕೆಲವು ದಿನಗಳ ಹಿಂದೆ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿತ್ತು. ಆದರೆ, ಹೊಸ ಜಾಗ ಸೇರಿಸಿಲ್ಲ ಅವರ ಬಳಿ ಬಗೆದಷ್ಟೂ ಹಣ, ದಾಖಲೆಗಳು ಹೊರಬರುತ್ತಲೇ ಇದೆ.ಮರಾಜ್ಯದ ೧೨ ಜಿಲ್ಲೆಗಳಲ್ಲಿ ೧೨ ಕ್ಕೂ ಭ್ರಷ್ಟರು ಲೋಕಾ ಬಲೆಗೆ ಬಿದ್ದಿದ್ದು, ಅವರೆಲ್ಲರಲ್ಲಿ ಹೆಚ್ಚು ಸಿರಿವಂತರು ಕೆ.ಆರ್. ಪುರ ತಹಸೀಲ್ದಾರ್ ಅಜಿತ್ ರೈ.ಕೆ.ಆರ್ ಪುರಂನಲ್ಲಿರುವ ಮನೆ ಸೇರಿದಂತೆ ನಗರದ ಹತ್ತು ಕಡೆ ಅಜಿತ್ ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆದಿದೆ.ಚಂದ್ರಾಲೇಔಟ್ ನ ಸ್ಕೈ ಲೈನ್ ಅಪಾರ್ಟ್ ಮೆಂಟ್ ನ ಫ್ಲ್ಯಾಟ್,ಕೆ.ಆರ್. ಪುರದಲ್ಲಿರುವ ವೈಭವೋಪೇತ ಮನೆ,ಸಹಕಾರನಗರದ ಪಾರ್ಚೂನ್ ಸೆಂಟರ್ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲ್ಯಾಟ್,ದೇವನಹಳ್ಳಿಯ ಇಳತ್ತೋರೆ ಹಳ್ಳಿಯಲ್ಲಿರುವ ಮನೆ,ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಐಟಿಸಿ ಪಾರ್ಕ್ ಬಳಿ ಇರುವ ಮನೆ ದೊಡ್ಡಬಳ್ಳಾಪುರದಲ್ಲಿ ಕೂಡಾ ದಾಳಿ ನಡೆದಿದೆ.ಅಜಿತ್ ಶೆಟ್ಟಿ ಬೆನಾಮಿ ಆಗಿರುವ ಬಸವೇಶ್ವರ ನಗರ ಗೌರವ್ ಶೆಟ್ಟಿ ಮನೆ, ಕೆ.ಆರ್. ಪುರ ತಹಸೀಲ್ದಾರ್ ಕಚೇರಿ,ಅಜಿತ್ ರೈ ಸಂಬಂಧಿಕರಿಗೆ ಸೇರಿದ ಮನೆ ಕಚೇರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೊರಕೆಯಲ್ಲಿರುವ ತಾಯಿ ಮನೆ
ಹೀಗೆ ಹತ್ತಾರು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಲ್ಲಿಂದ ಹಣ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.ಚಂದ್ರಾ ಲೇಔಟ್‌ನ ಸ್ಕೈಲೈನ್ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ದೊಡ್ಡ ಮೊತ್ತದ ಹಣ ಮತ್ತು ದಾಖಲೆಗಳು ಪತ್ತೆಯಾಗಿವೆ. ಇಲ್ಲಿನ ಫ್ಲ್ಯಾಟ್ ನಂಬರ್ ೫೦೧ಕ್ಕೆ ಬೆಳಗ್ಗೆ ಆರು ಗಂಟೆಗೆ ಲಗ್ಗೆ ಇಟ್ಟಿರುವ ಲೋಕಾಯುಕ್ತ ಅಧಿಕಾರಿಗಳು ಇನ್ನು ಪರಿಶೀಲನೆ ನಡೆಸುತ್ತಲೇ ಇದ್ದಾರೆ.ಚಂದ್ರಾ ಲೇಔಟ್‌ನ ಮನೆಯ ಪಾರ್ಕಿಂಗ್‌ನಲ್ಲಿರುವ ಐಷಾರಾಮಿ ಕಾರು ಮತ್ತು ಬೈಕ್‌ಗಳ ತಪಾಸಣೆಯನ್ನೂ ನಡೆಸಲಾಗುತ್ತಿದೆ.
ಎಲ್ಲ ಕಾರುಗಳ ಕೀಗಳನ್ನು ಪಡೆದಿರುವ ಅಧಿಕಾರಿಗಳು ಕಾರುಗಳ ಫೋಟೊ ತೆಗೆದುಕೊಂಡಿದ್ದಾರೆ. ಡಿವೈಎಸ್ಪಿ ಪ್ರಮೋದ್ ಅವರು ಅಜಿತ್ ರೈ ಅವರಿಗೆ ಸೇರಿದ ತಾರ್ ಜೀಪ್ ಹಾಗೂ ಫಾರ್ಚುನರ್ ಕಾರಿನ ಫೋಟೊ ಪಡೆದುಕೊಂಡರು.ಇತ್ತ ಸಹಕಾರ ನಗರದಲ್ಲಿರುವ ಮನೆಯಲ್ಲಿ ಹಣ, ದಾಖಲೆಗಳ ಜತೆ ಭಾರಿ ಮೌಲ್ಯದ, ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಲಿಕ್ಕರ್ ಬಾಟಲ್‌ಗಳು ಕೂಡಾ ಪತ್ತೆಯಾಗಿವೆ. ಪುತ್ತೂರಿನಲ್ಲಿರುವ ಮೂಲ ಮನೆಯಲ್ಲಿ ಕೂಡಾ ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.