
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ನಿನ್ನೆ ಸಂಜೆ ಕೆ.ಆರ್.ಪಿ ಪಕ್ಷದ ನಗರ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣ ಅವರು ಪುತ್ರಿ ಬ್ರಹ್ಮಿಣಿ ಜೊತೆ ನಗರದ ಹಂದ್ರಾಳ್, ಮುಂಡರಗಿ, ಗುಗ್ಗರಹಟ್ಟಿಗಳಲ್ಲಿ ನಡೆಸಿದ ರೋಡ್ ಶೋಮೂಲಕ ಬಹಿರಂಗ ಸಭೆಗೆ ಭಾರಿ ಜನಬೆಂಬಲ ಕಂಡು ಬಂತು.
ಸಭೆಯಲ್ಲಿ ನೆರೆದಿದ್ದ ಜನಸ್ತೋಮ ಪಕ್ಷದ ಜಯಘೋಷ ಮೊಳಗಿಸಿತು.
ಬಳ್ಳಾರಿಯ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ವಿಶೇಷವಾಗಿ ಮೂಲಸೌಕರ್ಯಗಳಾದ ಒಳಚರಂಡಿ, ನೀರು, ರಸ್ತೆಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಬಳ್ಳಾರಿಯ ರಿಂಗ್ ರಸ್ತೆ, ಬಡವರಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಹಾಗೂ ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರಲಾಗುವುದು ಎಂದು ಅಭ್ಯರ್ಥಿ ಮತದಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗೋನಾಳ ರಾಜಶೇಖರ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಹಂಪಿರಮಣ,ಪಾಲಿಕೆ ಸದಸ್ಯ ಕೋನಂಕಿ ತಿಲಕ್, ಮುಖಂಡರಾದ ಮುನ್ನಾಬಾಯ್, ವೆಂಕಟರಮಣ, ಭಾಷಾ, ಪರ್ವೀನ್ ಬಾನು, ಚಾಂದಿನಿ ಮೊದಲಾದವರು ಭಾಗವಹಿಸಿದ್ದರು.
One attachment • Scanned by Gmail