ಕೆ ಆರ್ ಪಿ ಪಕ್ಷದ ಸಂಘಟನೆ ಖಾಸಿಂ ನಾಯಕ್ ಅವರ ಹೆಗಲಿಗೆ

ರಾಯಚೂರು,ಮಾ.೦೪-
ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಎಲ್ಲಾ ಪಕ್ಷದಲ್ಲಿ ವಾತಾವರಣ ಬದಲಾವಣೆ ಆಗ್ತಿವೆ,ಹಲವಾರು ಮುಖಂಡರ ಮೇಲೆ ಜವಾಬ್ದಾರಿ ಹೆಚ್ಚುತ್ತಿವೆ, ಕೆಲವು ಮುಖಂಡರನ್ನು ಕಡೆಗಣಿಸುತ್ತಿದ್ದಾರೆ, ಇಂತಹ ಸಾಲಿನಲ್ಲಿ ನಿಂತಿರುವವರಲ್ಲಿ ಇತ್ತೀಚಿಗೆ ಜೆಡಿಎಸ್ ಗೆ ಗುಡ್ ಬೈ ಹೇಳಿ ಕೆ ಆರ್ ಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಪ್ರಮುಖರಲ್ಲಿ ಕಂಡುಬಂದಿದ್ದು ರಾಯಚೂರು ಗ್ರಾಮೀಣ ಕ್ಷೇತ್ರದ ಪ್ರಬಲ ನಾಯಕ ಕೆ. ಆರ್ ಪಿ ಪಕ್ಷದ ಖಾಸಿಂ ನಾಯಕ ಅವರು ಮಿಂಚುಣಿಯಲ್ಲಿದ್ದಾರೆ .
ಗ್ರಾಮೀಣ ಕ್ಷೇತ್ರದಲ್ಲಿ ಕೆ ಆರ್ ಪಿ ಪಕ್ಷದ ಸಂಘಟನೆ ಖಾಸಿಂ ನಾಯಕ್ ಅವರ ಹೆಗಲಿಗೆ ಹಾಕಲಾಗಿದೆ ಎಂದು ಕೆ ಆರ್ ಪಿ ಪಕ್ಷದ ಮುಖಂಡರು ತಿಳಿಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕೆ ಆರ್ ಪಿ ಪಕ್ಷದ ಸಂಸ್ಥಾಪಕ ಜನಾರ್ಧನ್ ರೆಡ್ಡಿ ಮುದಾಳತ್ವ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ
ಗ್ರಾಮೀಣ ಕ್ಷೇತ್ರದ ಉಸ್ತುವಾರಿಗಳಾದ ಸುಧಾಕರ್ ರೆಡ್ಡಿ, ಚೇತನ್ ರೆಡ್ಡಿ,ವೆಂಕಟೇಶ್ ರೆಡ್ಡಿ ಅವರ ನೇತೃತ್ವದಲ್ಲಿ ಅಲಿಖಾನ್ ಅವರ ಸಹಕಾರ ಹಾಗೂ ಕೆ ಆರ್ ಪಿ ಪಕ್ಷದ ಎಲ್ಲಾ ಮುಖಂಡರ ನೇತೃತ್ವದಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಕೆ ಆರ್ ಪಿ ಪಕ್ಷ ಬಲಪಡಿಸುವ ಮಹತ್ತರವಾದ ಕಾರ್ಯವನ್ನು ಖಾಸಿಂ ನಾಯಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನಮಾನ ಹೊಂದಿರುವ ಮುಖಂಡ ಖಾಸಿಂ ನಾಯಕ್ ಅವರು ಅನೇಕ ವರ್ಷಗಳಿಂದ ರಾಜಕೀಯದಲ್ಲಿದ್ದು ಗ್ರಾಮೀಣ ಕ್ಷೇತ್ರದಲ್ಲಿ ಪ್ರಭಲ್ಯಹೊಂದಿದ್ದಾರೆ, ಇವರ ನೇತೃತ್ವದಲ್ಲಿ ಕೆ ಆರ್ ಪಿ ಪಕ್ಷ ಸಂಘಟನೆ ಮಾಡಬೇಕಾಗಿರುವುದರಿಂದ ಇವರು ಸ್ಥಳೀಯರು ಮೇಲಾಗಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದವರು, ಅನೇಕ ಯುವಕರ ದಂಡು, ಹಿರಿಯ ಮುಖಂಡರ ಆಶೀರ್ವಾದ ಖಾಸಿಂ ನಾಯಕರ ಮೇಲೆ ಇರುವುದರಿಂದ ಪಕ್ಷ ಬಲಪಡಿಸುವುದರಲ್ಲಿ ಎರಡು ಮಾತಿಲ್ಲ.

ಬಾಕ್ಸ್
ಗ್ರಾಮೀಣ ಕ್ಷೇತ್ರದಲ್ಲಿ ಯುವ ನಾಯಕ ರಾಜಕೀಯ ಪರಿಣಿತರಾದ ಖಾಸಿಂ ನಾಯಕರ ಅಭಿಮಾನಿಗಳು ಕೆ ಆರ್ ಪಿ ಪಕ್ಷದಿಂದ ಈ ಬಾರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬೇಕೆಂದು ಒತ್ತಾಯಿಸುತ್ತಿದ್ದಾರೆ,
ಖಾಸಿಂ ನಾಯಕ್ ಅವರು ಅಭ್ಯರ್ಥಿ ಆಗಿ ಅಖಾಡದಲ್ಲಿ ಇರಬೇಕು ಅವರ ಗೆಲುವು ಖಚಿತವೆಂದು ಖಾಜವಲಿ, ಲಕ್ಷ್ಮಿಕಾಂತ, ಸೀನು,ಸೇರಿದಂತೆ ಹಲವಾರು ಕ್ಷೇತ್ರದ ಜನ ಜನಾರ್ಧನ್ ರೆಡ್ಡಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಆದರೆ ಖಾಸಿಂ ನಾಯಕರು ಕ್ಷೇತ್ರದ ಜನತೆಯನ್ನು ಕೇಳಲು ಮೊದಲು ಪಕ್ಷದ ಸಂಘಟನೆ ಮಾಡಬೇಕು,ಹಲವಾರು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗ್ತಿದ್ದಾರೆ,ಅವರೆಲ್ಲರು ಬಂದಾ ಮೇಲೆ ಕ್ಷೇತ್ರದ ಜನತೆಯನ್ನು ಕೇಳಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.