
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.16 ಕೆ.ಆರ್.ಪಿ.ಪಿ ಪಕ್ಷದ ವತಿಯಿಂದ ಧರಪ್ಪ ನಾಯಕ ಮತ್ತು ಜಿ.ಪಂ.ಮಾಜಿ ಸದಸ್ಯೆ ಎಚ್.ಸಿ ರಾಧ ಅಪಾರ ಜನ ಬೆಂಬಲ ದೊಂದಿಗೆ ನಾಮಪತ್ರ ಸಲ್ಲಿಸಿದರು.
ನಗರದಲ್ಲಿ ವಿಧಾನ ಸಭಾ ಕ್ಷೇತ್ರದ ಕೆ.ಆರ್.ಪಿ. ಪಕ್ಷದ ಅಭ್ಯರ್ಥಿ ಟಿ.ಧರಪ್ಪ ನಾಯಕ ಅಪಾರ ಬೆಂಬಲಿಗರೊಂದಿಗೆ ತಾಲ್ಲೂಕು ಆಡಳಿತ ಕಛೇರಿಯಲ್ಲಿನ ಚುನಾವಣಾಧಿಕಾರಿ ಸತೀಶ್ ರವರಿಗೆ ಶನಿವಾರ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಿಪಂ.ಮಾಜಿ ಸದಸ್ಯೆ ಎಚ್.ಸಿ.ರಾಧ ಅವರು ಕೆ.ಆರ್.ಪಿ. ಪಕ್ಷದಿಂದ ನಾಮಪತ್ರ ಸಲ್ಲಿಸಿದರು.
ನಗರದ ತಾಲೂಕು ಕ್ರೀಡಾಂಗಣ ದಿಂದ ತಹಶಿಲ್ದಾರರ ಕಚೇರಿಯ ವರೆಗೆ ಬೃಹತ್ ಜನ ಬೆಂಬಲ ದೊಂದಿಗೆ ಮೆರವಣಿಗೆ ಮೂಲಕ ಧರಪ್ಪ ನಾಯಕ ಹಾಗೂ ಎಚ್. ಸಿ ರಾಧ ರವರು ಬಳ್ಳಾರಿ ನಗರದ ಕೆ.ಆರ್.ಪಿ.ಪಿ ಅಭ್ಯರ್ಥಿ ಲಕ್ಷ್ಮಿ ಅರುಣ ರವರು ತರೆದ ವಾಹನದಲ್ಲಿ ಆಗಮಿಸಿದರು, ತಾಲೂಕಿನ ಕೆ.ಆರ್.ಪಿ.ಪಿ ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು ಸೇರಿ ಗುಲಾಬಿ ಹೂವಿನ ಹಾರ ಮತ್ತು ಪಕ್ಷದ ಗುರುತು ಆದ ಪುಟ್ಬಾಲ್ ನ ಬೃಹತ್ ಹಾರವನ್ನು ಹಾಕಿ ಸ್ವಾಗತಿಸಿದರು.
ಕೆ.ಆರ್.ಪಿ.ಪಿ. ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಅರುಣ ಲಕ್ಷ್ಮಿ, ಕೆ.ಆರ್.ಪಿ.ಪಿ.ಜಿಲ್ಲಾಧ್ಯಕ್ಷ ಗೋನಾಳು ರಾಶೇಖರ ಗೌಡ,ನೆಕ್ಕಂಟಿ ಮಲ್ಲಿಕಾರ್ಜುನ, ಮುಖಂಡ ಅಲಿಖಾನ್, ಮಹಿಳಾ ಅಧ್ಯಕ್ಷೆ ಹಂಪಿರಾಮಳ ಹಾಗೂ ತಾಲೂಕಿನ ಕೆ.ಆರ್.ಪಿ.ಪಿ ಪಕ್ಷದ ಮುಖಂಡರು ಮತ್ತು ಅಭಿಮಾನಿಗಳು ಇದ್ದರು.