ಕೆ.ಆರ್.ಪಿ ಪಕ್ಷದಿಂದ 240 ಮಹಿಳೆಯರಿಗೆ ಮೆಹಂದಿ ತರಬೇತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.14: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕಿ ಲಕ್ಷ್ಮಿ ಅರುಣ ಜನಾರ್ಧನರೆಡ್ಡಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಹತ್ತು ದಿನಗಳ ನಗರದ 240 ಮಹಿಳೆಯರಿಗೆ “ನಾರಿ ಜೀವನ” ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿದ್ದ ಮೆಹಂದಿ ತರಬೇತಿ ಶಿಬಿರ ಮುಕ್ತಾಯಗೊಂಡಿದೆ.
ಕರ್ನಾಟಕದ ಅತಿ ವೇಗದ ಮೆಹಂದಿ ಕಲೆಗಾರ ನರೇಶ್ ತರಬೇತಿ ನೀಡಿದ್ದು. ತರಬೇತಿ‌ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸುವ ಸಮಾರಂಭ  ನಡೆಯಿತು.
ತರಬೇತಿ ಪಡೆದ  ಶಿಬಿರಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿ  ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಮತ್ತು ಡಿಜಿಟಲ್ ಬ್ಲಾಕ್ ಸ್ಲೇಟ್
ವಿತರಿಸಲಾಯ್ತು.ಮಹಿಳಾ ಘಟಕದ ಅಧ್ಯಕ್ಷೆ ಸಿ.ಸಿ. ಹೇಮಲತಾ ಅಕ್ಕನ ಮನೆ ಅಧ್ಯಕ್ಷತೆವಹಿಸಿದ್ದರು
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗೋನಾಳ್ ರಾಜಶೇಖರ ಗೌಡ, ಎಸ್ ಬಿ ಗ್ರೂಪ್ ಇನ್ಸ್ಟಿಟ್ಯೂಶನ್ ಆಡಳಿತ ಅಧಿಕಾರಿಗ ಭವ್ಯ ಶೇಖರ್,  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹಂಪಿ ರಮಣ ಇದ್ದರು. ಮುಖಂಡ, ಬಿ.ಕೆ.ಬಿ.ಎನ್ ಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು.  ಕಾರ್ಯದರ್ಶಿ ಪ್ರಭುಶೇಖರ ಗೌಡ  ಪಕ್ಷದ ಕಾರ್ಯಕರ್ತರು ಇದ್ದರು.