
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ನಿನ್ನೆ ಸಾಯಂಕಾಲ ನಗರದ 9, 10, 11, 12, 13, 14, 16, ಮತ್ತು 17 ನೇ ವಾರ್ಡಿನ ಕೊಲ್ಮಿ ಚೌಕ್, ಶ್ರೀರಾಂಪುರ ಕಾಲೋನಿ, ಬಿಸಿಲಳ್ಳಿ, ಜನತಾನಗರ ಭಾಗಗಳಲ್ಲಿ ತಾವು ನಡೆಸಿದ ಬಹಿರಂಗ ಸಭೆ ಸಭೆಗೆ ಅಭೂತ ಪೂರ್ನವ ಜನಬೆಂಬಲ ದೊರೆತಿದೆಂದು ಅಭ್ಯರ್ಥಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಹೇಳಿದ್ದಾರೆ.
ಸಭೆಯಲ್ಲಿ ನೆರೆದಿದ್ದ ಜನಸ್ತೋಮ ಜಯಘೋಷ ಮೊಳಗಿಸಿದರು ಅವರ ಅಭಿಮಾನ ನೋಡಿದಾಗ ನನಗೆ ಆನಂದವಾಯಿತು. ಚುನಾವಣೆಗೆ ಸ್ಪರ್ಧಿಸಲು ಮುಂದಾದಾಗ ನಾನು ಒಬ್ಬಂಟಿ ಎಂಬ ಭಾವನೆ ಇತ್ತು ಈಗ ನಿಮ್ಮಂತರ ಸಾವಿರಾರು ಜನ ಸಭೆಗೆ ಬಂದು ಆಶಿರ್ವಾದ ಮಾಡುತ್ತಿರುವುದು ಸ್ಪೂರ್ತಿ ತಂದಿದೆ. ನನ್ನ ಗೆಲುವು ಖಚಿತ ಎಂಬ ವಿಶ್ವಾಸ ಮೂಡಿದೆಂದರು.
ಬಳ್ಳಾರಿಯ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ವಿಶೇಷವಾಗಿ ಮೂಲಸೌಕರ್ಯಗಳಾದ ಒಳಚರಂಡಿ, ನೀರು, ರಸ್ತೆಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಬಳ್ಳಾರಿಯ ರಿಂಗ್ ರಸ್ತೆ, ಬಡವರಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯ ಹಾಗೂ ಪ್ರಣಾಳಿಕೆಯ ಅಂಶಗಳನ್ನು ಜಾರಿಗೆ ತರಲಾಗುವುದು.
ಈ ಸಂದರ್ಭದಲ್ಲಿ ಪಕ್ಷದ ಪರಿಶಿಷ್ಟ ಪಂಗಡ ಅಧ್ಯಕ್ಷ ಉಮಾರಾಜ್, ಪಕ್ಷದ ಮುಖಂಡರಾದ ಕೋನಂಕಿ ತಿಲಕ್, ಮುನ್ನಾಬಾಯ್, ಗುರ್ರಂ ವೆಂಕಟರಮಣ, ವಿ.ಎಸ್.ಮರಿದೇವಯ್ಯ, ಸುಧಾಕರ್ ದೇಸಾಯಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಲಕ್ಷ್ಮಿ, ರಘು, ಮಾರುತಿ, ಭಾಷಾ, ಪರ್ವೀನ್ ಬಾನು,ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ನರಸಿಂಹ ಬಾಬು, ಚಾಂದಿನಿ, ಪಿಂಟೂ ಮೊದಲಾದವರು ಪಾಲ್ಗೊಂಡಿದ್ದರು.