ಕೆ.ಆರ್.ಎಸ್. ಪಿ ಪಕ್ಷದಿಂದ ವೇಬಾಕುಮಾರಿ ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಸಂಡೂರು :ಏ: 18: ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಕೆ.ಅರ್.ಎಸ್.ಪಿ. ಪಕ್ಷದಿಂದ ಹಾಗೂ ಸಾಮಾನ್ಯ ಮಹಿಳೆ ನಾಮಪತ್ರ ಸಲ್ಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಮತ್ತು ಕಾರ್ಮಿಕರ ಬೆಂಬಲ ಪಡೆಯುವ ಎಲ್ಲಾ ಲಕ್ಷಣಗಳನ್ನು ಪಡೆದುಕೊಂಡಿದ್ದಾರೆ. 
ಮತದಾರರ ಒಲೈಕೆ ಕಾರ್ಮಿಕರ ಸಹಕಾರದಿಂದಲೇ ಕಣಕ್ಕಿಳಿಯುವ ಸಾಹಸಕ್ಕೆ ಕೈ ಹಾಕಿರುವ ವೇಬಾ ಕುಮಾರಿ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು, ಅದರಲ್ಲು ಬಡ ಕಾರ್ಮಿಕ ವರ್ಗದವರಿಗೆ ಸದಾ ಬೆಂಬಲಿಗರಾಗಿ ತಾಲೂಕಿನಾದ್ಯಂತ ಸಂಚಾರ ಮಾಡಿರುವ ಇವರು ಚುನಾವಣಾ ಕಣದ ಮೂಲಕ ವಿಶೇಷ ಸ್ಪರ್ಧೆಯನ್ನು ನೀಡಲು ಮುಂದಾಗಿದ್ದಾರೆ, ಅತಿ ಹೆಚ್ಚು ಅದಾಯ ತರುವ ತಾಲೂಕು ಇದಾದರೂ ಸಹ ಸರಿಯಾದ ಸೌಲಭ್ಯಗಳು ಇನ್ನೂ ಇಲ್ಲವಾಗಿರುವುದನ್ನು ಕಂಡ ಇವರು ಚುನಾವಣಾ ರಾಜಕಾರಣದಲ್ಲಿ ಬದಲಾವಣೆ ಬಯಸಿ ಸ್ಪರ್ಧೆಗಿಳಿದಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹೊನ್ನೂರುಸ್ವಾಮಿ ಇತರ ಗಣ್ಯರು ಉಪಸ್ಥಿತರಿದ್ದರು, ಚುನಾವಣಾಧಿಕಾರಿ ಶರಣಬಸವರಾಜ ಅವರಿಗೆ ನಾಮಪತ್ರ ಸಲ್ಲಿಸಿದರು.