ಕೆ.ಆರ್.ಎಸ್.ಪಕ್ಷದ ಜನ ಚೈತನ್ಯಾ ಯಾತ್ರೆ ರಾಜ್ಯ ೨೭ ರಂದು ಲಿಂಗಸುಗೂರ ತಾಲೂಕಿಗೆ ಆಗಮನ

ಲಿಂಗಸುಗೂರ,ಜು.೨೫- ಪಟ್ಟಣದಲ್ಲಿ ಕೆ.ಆರ್.ಎಸ್ ಪಕ್ಷದಿಂದ ಲಿಂಗಸುಗೂರ ಪಟ್ಟಣದಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಕೆ.ಆರ್.ಎಸ್.ಪಕ್ಷದ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆ ತಾಲೂಕುಗಳಿಗೆ ಜನ ಚೈತನ್ಯ ಯಾತ್ರೆ ಪ್ರಾರಂಭಿಸಿದ್ದೇವೆ ಉತ್ತರ ಕರ್ನಾಟಕದ ಬಾಗದ ಗುಲ್ಬರ್ಗ ಯಾದಗಿರಿ ಬೀದರ್, ರಾಯಚೂರು ನಮ್ಮ ಜನ ಚೈತನ್ಯ ಯಾತ್ರೆ ಕೈಗೊಂಡಿದ್ದು ಇದೆ ತಿಂಗಳು ಜುಲೈ ೨೭ ರಂದು ಲಿಂಗಸುಗೂರ ತಾಲೂಕಿಗೆ ಜನ ಚೈತನ್ಯ ಯಾತ್ರೆ ಅಗಮಿಸಲಿದೆ ಹಾಗೂ ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರಾದ ಸಿ.ರವಿ ಕೃಷ್ಣ ರೆಡ್ಡಿ ಆಗಮಿಸಲಿದ್ದಾರೆ.
ಇವರಿಗೆ ಲಿಂಗಸುಗೂರ ಪಟ್ಟಣದ ಬಸವ ಸಾಗರ ರಸ್ತೆಯಿಂದ ಬಸ ಸ್ಟ್ಯಾಂಡ್ ಸರ್ಕಲ್ ಮುಖಾಂತರ ಸರಕಾರದ ಸಾರ್ವಜನಿಕ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಭ್ರಷ್ಟಾಚಾರ ಮುಕ್ತಾ ನಿರ್ಮೂಲನೆ ಜನ ಚೈತನ್ಯ ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಸಾರ್ವಜನಿಕರ ಅಹವಾಲು ಯಾವ ರೀತಿಯಲ್ಲಿ ತೆಗೆದು ಕೊಳ್ಳುತ್ತಾರೆ ಹಾಗೂ ಸಾರ್ವಜನಿಕರ ಕುಂದು ಕೊರತೆ ಗಳನ್ನು ನೀಗಿಸುವ ಕಾರ್ಯವನ್ನು ನಮ್ಮ ಕೆ.ಆರ್.ಎಸ್.ಪಕ್ಷದ ಕಾರ್ಯಕರ್ತರು ಕಾರ್ಯನಿರ್ವಹಿಸುವರು ಹಾಗೂ ಲಿಂಗಸುಗೂರ ತಾಲೂಕಿನಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವು ಭ್ರಷ್ಟಾಚಾರ ಮುಕ್ತಾ ರಾಜಕೀಯ ನೆಡೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್ ಎಸ್ ಪಕ್ಷದ ದುರಗಪ್ಪ ನಾಯಕ್ ಅಮರೇಶ ಐದಾಬಾವಿ. ಅದಪ್ಪ ಹುಸೇನಬಾಷ ಉಪಸ್ಥಿತರಿದ್ದರು.