ಕೆ.ಆರ್.ಎಸ್ ಪಕ್ಷದಿಂದ ಕೆ.ಜಿ.ಪೂಜಾರಿ 19 ಕ್ಕೆ ನಾಮಪತ್ರ

ಅಫಜಲಪುರ:ಎ.16: ರಾಷ್ಟ್ರೀಯ ಪಕ್ಷಗಳ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ದೇಶದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೆಆರ್‍ಎಸ್ ಪಕ್ಷವು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಿದೆ. ಆದ್ದರಿಂದ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಕೆಆರ್ ಎಸ್ ಪಕ್ಷದಿಂದ ಸ್ಪರ್ಧೆ ಮಾಡಲಿದ್ದೇನೆ ಎಂದು ಪಕ್ಷದ ಅಧೀಕೃತ ಅಭ್ಯರ್ಥಿ ಕೆ.ಜಿ.ಪೂಜಾರಿ ತಿಳಿಸಿದರು.
ಸುದ್ದಿಗೋಷ್ಟಿ ನಡೆಸಿದ ಅವರು ಏಪ್ರಿಲ್ 19ರಂದು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ನಾಲ್ಕು ದಶಕಳಿಂದ ಮತಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಜನರ ಮನಸ್ಸಿನಲ್ಲಿದ್ದೇನೆ. ಈ ಬಾರಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ತಿರ್ಮಾನ ಮಾಡಿದ್ದೇನೆ. ಮತಕ್ಷೇತ್ರದ ಹಿರಿಯರು ಮತ್ತು ಯುವಕರು ನನಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಹೀಗಾಗಿ ನನ್ನ ಉತ್ಸಾಹ ಹೆಚ್ಚಾಗಿದೆ. ಕೆಆರ್‍ಎಸ್ ಪಕ್ಷದ ತತ್ವ ಸಿದ್ಧಾಂತ ನಂಬಿಕೊಂಡು ಸಾಕಷ್ಟು ಜನ ಪಕ್ಷ ಸೇರ್ಪಡೆಯಾಗಲಿದ್ದಾರೆ. ಹೀಗಾಗಿ
ಮತದಾರರು ಹೆಚ್ಚಿನ ಬೆಂಬಲ ನೀಡುವ ಮೂಲಕ ನನ್ನ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಕೆಆರ್‍ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಬಣ್ಣ ಜಮಾದಾರ ಮಾತನಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಕೆಆರ್‍ಎಸ್ ಪಕ್ಷ ನಿರಂತರವಾಗಿ ಕೆಲಸ ಮಾಡುತ್ತಿದ್ದೆ. ರಾಜ್ಯವ್ಯಾಪಿ ಯುವಕರು ಸ್ವಯಂ ಪ್ರೇರಿತರಾಗಿ ಸದಸ್ಯರಾಗುತ್ತಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಕೆಆರ್‍ಎಸ್ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ ಮತದಾರರು ನಮ್ಮ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದರು.
ಈ ವೇಳೆ ಕೆಆರ್‍ಎಸ್ ಜಿಲ್ಲಾಧ್ಯಕ್ಷ ವಿಜಯ ಜಾಧವ, ಉಪಾಧ್ಯಕ್ಷ ಪ್ರಕಾಶ ಹೊಟ್ಕರ್, ತಾಲೂಕಾಧ್ಯಕ್ಷ ದಯಾನಂದ ಪಾಟೀಲ ಮುಖಂಡರಾದ ಶಿವು ಸಂಗೋಳಗಿ, ಹರ್ಶು ವಡಗೇರಿ, ಸಚಿನ್ ಇದ್ದರು.