ಕೆ.ಆರ್.ಎಸ್ ಗ್ರಾಮ ಘಟಕ ಉಪಾಧ್ಯಕ್ಷರ ಮೇಲೆ ಹಲ್ಲೆ-ಕ್ರಮಕ್ಕೆ ಒತ್ತಾಯ

ಸಿರವಾರ,ಜು.೨೩- ಗ್ರಾಮಪಂಚಾಯತಿ ಅನುದಾನದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಕಳಪೆಯಾಗಿದೆ, ಅಧಿಕಾರಿಗಳ, ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮಕೈಗೊಳುವಂತೆ ಪಿಡಿಓ ಹಾಗೂ ಹಿರಿಯ ಅಭಿಯಂತರರಿಗೆ ಹೇಳುವಾಗಿ ಕರ್ನಾಟಕ ರೈತ ಸಂಘದ ಗ್ರಾಮ ಘಟಕದ ಉಪಾದ್ಯಕ್ಷ ಹಾಗೂ ಗ್ರಾ.ಪಂ ಸದಸ್ಯರ ಮೇಲೆ ಮಾರಣಾಂತಿವಾಗಿ ಹಲ್ಲೆ ಮಾಡಲಾಗಿದ್ದೂ, ಹಲ್ಲೆಗೆ ಕಾರಣವಾದವರನ್ನು ಬಂಧಿಸಿ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳುವಂತೆ ಒತ್ತಾಯಿಸಿ ತಾ.ಪಂ ಇಓ ಅವರಿಗೆ ಕರ್ನಾಟಕ ರೈತ ಸಂಘದಿಂದ ತಾ.ಪಂ ಇಓ ಅವರಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಿದರು.
ತಾಲೂಕಿನ ಚಾಗಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಕಂದಿನ್ನಿ ಗ್ರಾಮದಲ ಅಂಗನವಾಡಿ ಕಟ್ಟಡ ನಿರ್ವಹಣಾ ಕಾಮಾಗಾರಿಯಲ್ಲಿ ಪಿ.ಡಿ.ಓ ಮತ್ತು ಹಿರಿಯ ಅಭಿಯಂತರರು ಪರ್ಸೆಂಟೇಜ, ರಿಯಾಯತಿ ಒಪ್ಪಂದದಿಂಧ ಖಾಸಗಿ ಗುತ್ತಿಗೆದಾರ ಓರ್ವನೊಬ್ಬನಿಗೆ ಕೊಟ್ಟಿದ್ದನನು ವಿರೋಧಿಸಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದ ಕೆ.ಆರ್.ಎಸ್ ಸಂಘಟನೆ ಉಪಾಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ ನಾಯಕ ಕ್ಷುಲಕ್ಕ ಕಾರಣಕ್ಕಾಗಿ ಹಿಗ್ಗಾ ಮುಗ್ಗಾ ಹೊಡೆದು ಮಾರಣಾಂತಿವಾಗಿ ಹಲ್ಲೆ ಮಾಡಲಾಘಿದೆ, ೨೪ ಗಂಟೆಯಾಗುತಾ ಬಂದರೂ ಸಹ ಪ್ರಕರಣ ದಾಖಲಾಗಿಲ, ಹಲ್ಲೆಗೆ ಕಾರಣರಾದ ಪಿ.ಡಿ.ಓ, ಅಭಿಯಂತರ ಮೇಲೆ ಸೂಕ್ತ ಕ್ರಮಕೈಗೊಳಬೇಕು. ವಿಳಂಭ ಮಾಡಿದರೆ ನಮ್ಮ ಸಂಘಟನೆಯಿಂದ ತಾ.ಪಂ ಕಛೇರಿಯ ಮುಂಧೆ ಪ್ರತಿಭಟನೆ ಮಾಡಲಾಗುವುದ ಎಂದು ತಿಳಿಸಿದ್ದಾರೆ.
ಅಧ್ಯಕ್ಷ ನಾಗರಾಜ ಬೊಮ್ಮನಾಳ, ಚಂದ್ರಶೇಖರ ಹಡಪದ್, ಹುಲ್ಲಿಗೆಪ್ಪ ಮಡಿವಾಳ, ವಿರೇಶ ನಾಯಕ, ಹುಲ್ಲಿಗೆಪ್ಪಸೂರಿ, ಗೌರಪ್ಪ, ಮಾರೆಪ್ಪ, ಮುದುಕಪ್ಪನಾಯಕ, ಶಿವಪ್ಪ, ಮಲ್ಲಯ್ಯ, ವೆಂಕೋಬ ನಾಯಕ, ಬಸವರಾಜ ಶಿನವಪ್ಪ ಸೇರಿದಂತೆ ಇನ್ನಿತರರು ಇದ್ದರು.