ಕೆ.ಅರ್.ಪಿ. ಪಕ್ಷದಿಂದ ಸ್ಪರ್ಧಿಸುವ ಮೂಲಕ ಕೆ.ಎಸ್. ದಿವಾಕರ್ ಬಿಜೆಪಿಗೆ ಸೆಡ್ಡು


ಸಂಜೆವಾಣಿ ವಾರ್ತೆ
ಸಂಡೂರು :ಏ: 18:  ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಉತ್ತಮದಿನವಾಗಿದೆ ಎಂದು ಭಾರಿ ಬಹಿರಂಗ ಸಭೆಯ ನಂತರ ಮತದಾರರ ಅಭಿಪ್ರಾಯ ಸಂಗ್ರಹ ಮಾಡಿ, ಜನರೇ ಪಕ್ಷೇತರರಾಗಿ ಸ್ಪರ್ಧಿಸುವುದು ಬೇಡ, ಯಾವುದಾದರೂ ಪಕ್ಷದಿಂದ ಸ್ಪರ್ಧಿಸಿ ಎಂದು ಜೈಘೋಷಣೆ ಮತ್ತು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ ಪರಿಣಾಮವಾಗಿ ಕೆ.ಎಸ್. ದಿವಾಕರ ಅವರು ಬಳ್ಳಾರಿಯ ಜನಾರ್ಧನ ರೆಡ್ಡಿಯವರ ಪಕ್ಷವಾದ ಕೆ.ಅರ್.ಪಿ.ಪಿ. ಪಕ್ಷದಿಂದ ಕಣಕ್ಕಿಳಿಯಲು ಪೂರ್ಣ ತಯಾರಿ ನಡೆಸಿದ ತಕ್ಷಣ ಕೆ.ಅರ್.ಪಿ. ಪಿ. ಪಕ್ಷದಿಂದ ಬಿ ಫಾರಂ ಪಡೆಯುವುದರೊಂದಿಗೆ ಸೋಮವಾರ ಚುನಾವಣಾಧಿಕಾರಿ ಶರಣಬಸವರಾಜ ಅವರಿಗೆ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಸವಾಲನ್ನು ಎಸೆದಿರುವುದು ಸ್ಪಷ್ಟವಾಗಿ ಕಂಡು ಬಂದಿತು.
ನಾಮಪತ್ರದ ಬಳಿಕೆ ಮಂಗಳವಾರ, ಇಂದು ಬೃಹತ್ ಬಹಿರಂಗ ಮೆರವಣಿಗೆಯನ್ನು ನಡೆಸುವ ಮೂಲಕ ಇಡೀ ಪಟ್ಟಣದಲ್ಲಿ ಅದ್ದೂರಿಯಾದ ಸಂಭ್ರಮದೊಂದಿಗೆ ಮತ್ತೋಮ್ಮೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಈ ಸಂದರ್ಭದಲ್ಲಿ ಇಡೀ ತಾಲೂಕಿನ ಎಲ್ಲಾ ಯುವ ಪಡೆ, ರೈತ ಪಡೆಗಳನ್ನು ಮತ್ತು ಎಲ್ಲಾ ಮತದಾರರ ಬಂಧುಗಳೊಂದಿಗೆ ಅಗಮಿಸುವುದಾಗಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಮುಖಂಡರಾದ ಕೆ.ನಾಗರಾಜ, ಹಾಗೂ ಇತರರು ಉಪಸ್ಥಿತರಿದ್ದರು.