ಕೆಹೆಚ್‌ಬಿ ಕಾಲೋನಿಗೆ ನಗರ ಸಾರಿಗೆ ಬಸ್ : ಚಾಲನೆ ನೀಡಿದ ಮೇಯರ್


ದಾವಣಗೆರೆ.ನ.೬; ನಗರದ ಕೆ.ಹೆಚ್.ಬಿ ಕಾಲೋನಿ ತುಂಗಭದ್ರ ಬಡಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ಬಸ್ ಸೌಕರ್ಯವಿಲ್ಲದ ಬಗ್ಗೆ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್ ಅವರ ಗಮನಕ್ಕೆ ತಂದು ಮನವಿ ಮಾಡಿದರು. ಬಸ್ ವ್ಯವಸ್ಥೆ ಇಲ್ಲದೇ ಅಲ್ಲಿನ ವೃದ್ಧರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳ ಕಷ್ಟವನ್ನು ಅರಿತ ಮಹಾಪೌರರು ಕೂಡಲೇ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ವ್ಯವಸ್ಥೆ ಕಲ್ಪಿಸಿ, ಖುದ್ದು ತಾವೇ ಪ್ರಯಾಣ ಸುವ ಮೂಲಕ ಮೇಯರ್ ಬಿ.ಜಿ.ಅಜಯ್ ಕುಮಾರ್ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೆಹೆಚ್‌ಬಿ ಬಡಾವಣೆಯ ಹಿರಿಯ ನಾಗರೀಕರಾದ ದ್ಯಾಮಪ್ಪನವರು ಮಾತನಾಡಿ ಕೇವಲ ಒಂದು ಪೋನ್ ಕರೆಗೆ ಸ್ಫಂದಿಸಿ ಬಡಾವಣೆಯ ನಿವಾಸಿಗಳಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ, ಜೊತೆಯಲ್ಲಿ ಮೂಲಭೂತ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಕಲ್ಪಿಸುವ ಕುರಿತು ಮೇಯರ್‌ರವರು ಹೇಳಿದ್ದು ಸ್ವಾಗತಾರ್ಹ ಕಾರ್ಯವಾಗಿದೆ ಎಂದರು.
ಈ ವೇಳೆ ಬಸವರಾಜ್ ಕೂಲೇರ್, ಹನುಮಂತನಾಯ್ಕ, ಶಾಲಾ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಾವಿಕಟ್ಟೆ, ಎಸ್.ಆರ್.ಹಿರೇಮಠ, ವೀರಯ್ಯ ಹಿರೇಮಠ, ಕೆ.ಎಂ.ಮಾಲತೇಶ್, ಎಂ.ಎಸ್..ರೇವಣಪ್ಪ, ಚಂದ್ರಶೇಖರ ಹಾದಿಮನಿ, ಶ್ರೀಧರ್ ಮಾತನವರ, ಭಾಸ್ಕರ್, ವಾಸುದೇವ್.ಸಿಎನ್, ಶ್ಯಾಮ್ ಶೆಟ್ರು, ಮಲ್ಲಿಕಾರ್ಜುನ್ ಶಿಡೇನೂರು ಸೇರಿದಂತೆ ಸ್ಥಳೀಯರು ಇದ್ದರು.