ಕೆಹೆಚ್‌ಎಂಗೆ ಸಿಎಂ ಸ್ಥಾನಕ್ಕೆ ಶ್ರೀನಿವಾಸ ಆಗ್ರಹ

ಕೋಲಾರ,ಮೇ,೧೭:ರಾಜ್ಯದ ಹಿರಿಯ ದಲಿತ ನಾಯಕರಾದ ಕೆ.ಹೆಚ್.ಮುನಿಯಪ್ಪ ಅವರಿಗೆ ಮುಖ್ಯ ಮಂತ್ರಿ ಸ್ಥಾನ ನೀಡುವ ಮೂಲಕ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸ ಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಆಗ್ರಹ ಪಡೆಸಿದರು
ನಗರದ ಜಿಲ್ಲಾ ಕಾಂಗ್ರೇಸ್ ಭವನದದಿಂದ ಮೆಕ್ಕೆವೃತ್ತದವರೆಗೆ ಕಾಲ್ನಡಿಗೆಯ ಜಾಥ ನಡೆಸಿ ಅವರು ಮಾತನಾಡುತ್ತಾ ಕೆ.ಹೆಚ್.ಮುನಿಯಪ್ಪ ಅವರು ೭ ಭಾರಿ ಕೋಲಾರ ಲೋಕ ಸಭಾ ಸದಸ್ಯರಾಗಿದ್ದು ಕೇಂದ್ರ ಸಚಿವರಾಗಿ ಹಾಗೂ ಎ.ಐ.ಸಿ.ಸಿ. ಹಲವು ಜವಾಬ್ದಾರಿ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಸುಮಾರು ೩ ದಶಕಗಳ ಕಾಲ ಕಾಂಗ್ರೇಸ್ ಪಕ್ಷದಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ ಎಂದರು,
ಕಾಂಗ್ರೇಸ್ ಪಕ್ಷದಿಂದ ದೇವನಹಳ್ಳಿ ವಿಧಾನಕ್ಷೇತ್ರಕ್ಕೆ ಟಿಕೆಟ್ ನೀಡಿದರೂ ಸಹ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ರಾಜ್ಯದ ಮುಖ್ಯ ಮಂತ್ರಿ ಸ್ಥಾನವನ್ನು ನೀಡಿದಲ್ಲಿ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿದಂತಾಗಲಿದೆ. ಕಾಂಗ್ರೇಸ್ ಪಕ್ಷದಲ್ಲಿ ದಲಿತರಿಗೆ ಮುಖ್ಯ ಮಂತ್ರಿ ಸ್ಥಾನ ನೀಡಿಲ್ಲ ಎಂಬ ಅಪಾದನೆಯಿಂದ ಮುಕ್ತಿ ಹೊಂದಂತಾಗಲಿದ ಎಂಬ ಅಭಿಪ್ರಾಯವನ್ನು ನೀಡಿದರು,
ಕೆ.ಹೆಚ್.ಮುನಿಯಪ್ಪ ಅವರು ಕಳೆದ ೩೦ ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಸಂಘಟಿಸಿ ಕೋಲಾರ ಜಿಲ್ಲೆಯನ್ನು ಕಾಂಗ್ರೇಸ್ ಪಕ್ಷದ ಭದ್ರಕೋಟೆಯನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುವುದಕ್ಕೆ ಐತಿಹಾಸಿಕ ದಾಖಲೆಗಳ ಪುಟಗಳಲ್ಲಿ ಕಾಣಬಹುದಾಗಿದೆ ಹಾಗಾಗಿ ಕೆ.ಹೆಚ್.ಮುನಿಯಪ್ಪನವರ ನಾಯಕತ್ವ ರಾಜ್ಯದಲ್ಲಿ ಅತ್ಯವಶ್ಯಕವಾಗಿದ್ದು, ದಲಿತರ ಪರ ಧ್ವನಿ ಎತ್ತಲು ಕೆ.ಹೆಚ್.ಮುನಿಯಪ್ಪ ಅವರಿಗೆ ಸ್ಥಾನ ಮಾನ ನೀಡ ಬೇಕಾಗಿದೆ ಎಂದು ಒತ್ತಾಯಿಸಿದರು,
ಕೆ.ಹೆಚ್. ಮುನಿಯಪ್ಪ ಅಪಾರವಾದ ಅನುಭವವನ್ನು ಹೊಂದಿದ್ದು, ಮುಖ್ಯ ಮಂತ್ರಿ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಒಂದು ವೇಳೆ ಅವಕಾಶ ಇಲ್ಲದಿದ್ದಲ್ಲಿ ಉಪಮುಖ್ಯ ಮಂತ್ರಿಯನ್ನಾಗಿ ಮಾಡ ಬೇಕು, ಅದರೆ ನಮ್ಮ ಒತ್ತಾಯ ಕೆ.ಹೆಚ್.ಮುನಿಯಪ್ಪ ಅವರನ್ನು ಮುಖ್ಯ ಮಂತ್ರಿ ಮಾಡ ಬೇಕು, ಮುಂಬರುವ ಲೋಕಸಭಾ ಚುನಾವಣೆ ಹಾಗೂ ಪಂಚಾಯತ್ ಚುನಾವಣೆಯ ದೆಸೆಯಲ್ಲಿ ನೀಡಿದಲ್ಲಿ ಉತ್ತಮ ಸಂಘಟನೆ ಹಾಗೂ ಫಲಿತಾಂಶ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡೆಸಿದರು,
ಕಾಂಗ್ರೆಸ್ ಪಕ್ಷದ ಮುಖಂಡರಾದ ಉದಯ್ ಶಂಕರ್, ಜಯದೇವ್, ನಾಗರಾಜ್, ಯಲ್ಲಪ್ಪ, ಹಾರೋಹಳ್ಳಿ ರವಿ, ಲಾಲ್ ಬಹುದ್ದೊರ್ ಶಾಸ್ತ್ರಿ, ಮಾರ್ಜೇನಹಳ್ಳಿ ಶಫಿ, ಜಬ್ಬರ್, ನಾಗೇಶ್, ಮಿಲ್ಟ್ರೀರಾಮಯ್ಯ,ಮುಂತಾದವರು ಇದ್ದರು,