ಕೆಸರು ಗದ್ದೆಯಾದ ದಾವಣಗೆರೆ ಮಹಾಲಕ್ಷಿö್ಮÃ ಬಡಾವಣೆ

ಸಂಜೆವಾಣಿ ವಾರ್ತೆ

ದಾವಣಗೆರೆ-ಜು.22;ಭಾರತದಲ್ಲಿ ಎಲ್ಲೂ ಇಲ್ಲದ ಕರ್ನಾಟಕ ಹೃದಯ ಭಾಗವಾದ ಇತಿಹಾಸ ಪರಂಪರೆಯ ದೇವನಗರಿ ದಾವಣಗೆರೆಯು (ಸ್ಮಾರ್ಟ್ ಸಿಟಿ) ಸೌಂದರ್ಯ ನಗರ ಎಂದು ಕಳೆದ ಐದು ವರ್ಷಗಳಿಂದ ನಾಮಕರಣ ಮಾಡಿ ದಾವಣಗೆರೆಯಿಂದ ರಾಷ್ಟಿçÃಯ ಹೆದ್ದಾರಿ ಸೇರಿ (ಬೈಪಾಸ್ ರೋಡ್) ವಿವಿಧ ಬಡಾವಣೆಗಳ ಹೆದ್ದಾರಿ ಮಹಾಲಕ್ಷಿö್ಮà ಬಡಾವಣೆ ಇಂದು ಕೆಸರು ಗದ್ದೆಯಾಗಿರುವುದು ವಿಪರ್ಯಾಸ.ಕಳೆದ ಹಲವಾರು ವರ್ಷಗಳಿಂದ ಈ ಬಡಾವಣೆಯ ಅಭಿವೃದ್ಧಿಯ ಕುರಿತು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್‌ಗೆ ಈ ಭಾಗದ ಮಹಾನಗರ ಪಾಲಿಕೆಯ ಕಾರ್ಪೋರೇಟರ್‌ಗಳಿಗೆ ಸಾಕಷ್ಟು ಸಾರಿ ಮನವಿ ಸಲ್ಲಿಸಿದ್ದಾಯಿತು. ಜಲಸಿರಿ ಯೋಜನೆಯೂ ಅಭಿವೃದ್ಧಿಯಾಗದೇ ಈ ಭಾಗದ ಸಾರ್ವಜನಕರಿಗೆ ಕುಡಿಯಲು ನೀರೂ ಇಲ್ಲ “ಸಮುದ್ರದ ನೆಂಟಸ್ತನ ಉಪ್ಪಿಗೆ ಬರ” ಎಂಬ ಗಾದೆ ಮಾತಿನಂತೆ ಪಕ್ಕದಲ್ಲೇ ಕುಂದುವಾಡ ಕೆರೆ ಇದ್ದು ಕುಡಿಯಲು ನೀರಿನ ಕೊರತೆ ವಿಷಾದದ ಸಂಗತಿ.ಇನ್ನಾದರೂ ಈ ಬಡಾವಣೆಯ ನಾಗರೀಕರ ಸಮಿತಿ ಎಚ್ಚೆತ್ತುಕೊಂಡು ಸಾಮಾಜಿಕ ಕಾಳಜಿಯೊಂದಿಗೆ ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್‌ಗೆ ಹಕ್ಕೊತ್ತಾಯ ಮಾಡಬೇಕಾಗಿದೆ ಎಂದು ಈ ಬಡಾವಣೆಯ ವಾಸಿ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.