ಕೆಸರು ಗದ್ದೆಯಂತಾದ ಕೆಲ ರಸ್ತೆಗಳುಕಣ್ಮುಚ್ಚಿ ಕುಳಿತ ಗ್ರಾ.ಪಂ. ಅಧಿಕಾರಿಗಳು, ಅಧ್ಯಕ್ಷರು ಸರ್ವ ಸದಸ್ಯರು

(ತಾಯಪ್ಪ ಎಸ್ ನಾಯಕ)

ಇಜೇರಿ:ಜು.19:ಗ್ರಾಮದಲ್ಲಿ ಹಲವು ವಾರ್ಡಿನ ರಸ್ತೆಗಳು ಕೆಸರಿನ ಗದ್ದೆಯಂತೆಯಾಗಿವೆ,ಮಳೆಯಿಂದ ಹಲವಾರು ರಸ್ತೆಗಳು ಹದಗೆಟ್ಟಿವೆ ಇದನ್ನು ಕಂಡರು ಕಾಣದೆ ಹಾಗೆ ಕುಳಿತಿರುವ ಸಂಬಂಧ ಪಟ್ಟ ಅಧಿಕಾರಿಗಳು,ಇಂತಹ ರಸ್ತೆ ಮೇಲೆ ನಡೆದಾಡಲು ಕೆಲ ವಾರ್ಡಿನ ಜನರು ಗೊಳಾಡುತ್ತಿದ್ದಾರೆ,ಕೆಸರು ಗದೆಯಂತಯಾಗಿರುವ ರಸ್ತೆ ಮೇಲೆ ವಯಸ್ಸಾದ ಮುದಕ ಮುದಿಕಿಯರು, ಚಿಕ್ಕ ಚಿಕ್ಕ ಮಕ್ಕಳು ಶಾಲೆಗೆ ಹೋಗಲು ಕೇಸರಿನಲ್ಲೇ ಹೋಗುವ ಪರಿಸ್ಥಿತಿಯಾಗಿದೆ, ಯಾವ ಸಮಯದಲ್ಲಿಯಾದರು ಕೂಡ ಇಂತಹ ರಸ್ತೆ ಮೇಲೆ ಹೋಗುವಾಗ ಕಾಲು ಜಾರಿ ಬೀಳವುದಾಗಲಿ ಮತ್ತು ದ್ವಿ ಚಕ್ರ ವಾಹನದಲ್ಲಿ ಹೋಗುವಾಗ ಸ್ಕಿಡ್ ಆಗಿ ಬೀಳುವುದಾಗಲಿ ಆಗುತ್ತಿದರು ಇದರ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ರಸ್ತೆ ಕಾಮಗಾರಿಗಳು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ, ಒಂದು ವೇಳೆ ಸಿಸಿ ರಸ್ತೆ ಕಾಮಗಾರಿಗಳು ಮಾಡಿಕೊಡದಿದ್ದರೆ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಯಾಗುತ್ತರೆ ಎಂದು ಗ್ರಾಮಸ್ಥರು ಅಳಲು ಹೇಳಿಕೊಂಡಿದ್ದಾರೆ,

2022-23 ನೇ ಸಾಲಿನ ಈ ಕಾಮಗಾರಿಗಳ ಬಗ್ಗೆ ನಾವು ಕೂಡ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಆದಷ್ಟು ಬೇಗ ಈ ಕಾಮಗರಿಗಳನ್ನು ಮಾಡಿಕೊಡುತ್ತೇವೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಅರವಿಂದ ಸಾಹು ರವರು ಹೇಳಿದ್ದಾರೆ.

ಶ್ರಾವಣಕುಮಾರ ಡಿ ನಾಯಕ:ಮಳೆಯಿಂದ ಗ್ರಾಮದಲ್ಲಿ ಹಲವು ರಸ್ತೆಗಳು ಹದಗೆಟ್ಟಿವೆ ಇದರಿಂದ ಗ್ರಾಮದ ಜನರಿಗೆ ನಡೆದಾಡಲು ಬಹಳಷ್ಟು ಸಂಕಟವಾಗುತ್ತಿದೆ ಕೆಸರಿನಲ್ಲಿ ನಡೆದಾವುದರಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ಹಾಗೂ ನಡೆದುಕೊಂಡು ಹೋಗುತಿರುವ ಜನರಿಗೆ ಇಂತಹ ವಲಸೆ ಆದ ರಸ್ತೆಗಳಲ್ಲಿ ನಡೆದಾಡುವುದರಿಂದ ರೋಗಗಳ ಬರುತ್ತವೆ ಮತ್ತು ಇದರಿಂದ ಅರೋಗ್ಯ ಕೆಟ್ಟುಹೋಗುತ್ತೆ ಆದ ಕಾರಣ ಈ ಸಿಸಿ ರಸ್ತೆಗಳು ಆದಷ್ಟು ಬೇಗನೆ ಮಾಡಿಕೊಡಬೇಕು ಒಂದು ವೇಳೆ ಮಾಡಿಕೊಡದಿದ್ದರೆ ನಾವು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ಮೂಲಕ ತಿಳಿಸಿತಿದ್ದೇವೆ ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕರು ತಿಳಿಸಿದ್ದಾರೆ