ಕೆಸರುಮಯವಾದ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ: ಸಾರ್ವಜನಿಕರಿಗೆ ತೊಂದರೆ

ಬಂಟ್ವಾಳ, ಜೂ.೫- ಬಂಟ್ವಾಳ ತಾಲೂಕಿನ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ ದ ಆವರಣ ಕೆಸರುಮಯವಾಗಿದ್ದು ವಾಹನಗಳು ಮತ್ತು ಸಾರ್ವಜನಿಕರು ನಡೆದಾಡಲು ಕೂಡ ತೊಂದರೆಯಾಗುತ್ತಿದೆ. ಮಾಣಿ ಸುತ್ತಮುತ್ತಲಿನ ಪ್ರದೇಶದ ಜನರು ಇಲ್ಲಿ ಕೋವಿಡ್ ಲಸಿಕೆ ಪಡೆಯಲು ಬರುತ್ತಿದ್ದಾರೆ.ಲಸಿಕೆ ಪಡೆಯಲು ಟೋಕನ್ ಪಡೆಯಲು ಜನರು ಮುಂಜಾನೆಯಿಂದ ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಾರೆ.ಇಲ್ಲಿ ಮಕ್ಕಳು,ಹಿರಿಯನಾಗರಿಕರು,ರೋಗಿಗಳು ಕೂಡ ನಡೆದುಕೊಂಡು ಹೋಗಲು ಕೂಡ ಸಾದ್ಯವಿಲ್ಲ. ಸಂಬಂಧಪಟ್ಟವರು ಈ ಅವ್ಯವಸ್ಥೆ ಯನ್ನು ಹೋಗಲಾಡಿಸಬೇಕೇಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.