ಕೆಸರುಗದ್ದೆ ಸ್ಪರ್ಧೆ ಮನಸ್ಸಿಗೆ ಆನಂದವನ್ನು ಉಂಟು ಮಾಡುತ್ತದೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.11:- ಕೆಸರು ಗದ್ದೆ ಆಟ ಮತ್ತು ಸ್ಪರ್ಧೆ ಮನಸ್ಸಿಗೆ ಆನಂದವನ್ನು ಸಂತೋಷವನ್ನು ಉಂಟುಮಾಡುತ್ತದೆ ಎಂದು ಇನ್ನರ್‍ವ್ಹೀಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಲಕ್ಷ್ಮೀ ಶಿವಕುಮಾರ್ ತಿಳಿಸಿದರು.
ಶ್ರೀ ಕೃಷ್ಣ ಪ್ರತಿμÁ್ಠನದ ವತಿಯಿಂದ ಜಾಲಹಳ್ಳಿ ಹುಂಡಿ ಹಾಲು ಗೋವಿಂದರವರ ತೋಟದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಕೆಸರುಗದ್ದೆ ಆಟ ಹಾಗೂ ಶ್ರೀ ಕೃಷ್ಣ ಪೂಜೆಯಲ್ಲಿ ಮಾತನಾಡಿ ಕೆಸರು ಆಟದಿಂದ ಒತ್ತಡ ನಿವಾರಣೆಯಾಗಿ ಮಕ್ಕಳಲ್ಲಿ ಚೈತನ್ಯ, ಸ್ಪೂರ್ತಿ, ಶಕ್ತಿ ಹಾಗೂ ಧೈರ್ಯವನ್ನು ಉಂಟು ಮಾಡುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ನಗರಸಭಾ ಸದಸ್ಯರಾದ ಗಾಯತ್ರಿ ಚಂದ್ರಶೇಖರ್ ಮಾತನಾಡಿ ಶ್ರೀ ಕೃಷ್ಣ ಪ್ರತಿμÁ್ಠನ ಮೊಸರು ಉತ್ಸವ ಹಮ್ಮಿಕೊಳ್ಳುವ ಮೂಲಕ ಚಾಮರಾಜನಗರದಲ್ಲಿ ಹೊಸ ಸಂಸ್ಕøತಿ ಮತ್ತು ಪರಂಪರೆಯನ್ನು ಸೃಷ್ಟಿಸಿದೆ. ಆಧ್ಯಾತ್ಮಿಕತೆಯ ಮೂಲಕ ಯುವಕರಲ್ಲಿ ಜಾಗೃತಿಉಂಟು ಮಾಡುತ್ತಿರುವ ಶ್ರೀ ಕೃಷ್ಣ ಪ್ರತಿμÁ್ಠನ ಅಭಿನಂದನೆಗೆ ಅರ್ಹರು ಎಂದರು.
ನಗರಸಭಾ ಸದಸ್ಯರಾದ ಮಮತಾ ಬಾಲಸುಬ್ರಮಣ್ಯಂ ಮಾತನಾಡಿ, ಕೆಸರುಗದ್ದೆ ಆಟ ಪ್ರಕೃತಿಯನ್ನು ಹೇಗೆ ಉಳಿಸಬೇಕು ಹಾಗೂ ಪ್ರಕೃತಿಯ ಮೂಲಕ ದೈವತ್ವವನ್ನು ಕಾಣುವುದು ಹೇಗೆ ಎಂಬ ಸಂಕಲ್ಪಕೊಡಲು ಸಹಕಾರಿಯಾಗುವುದು. ಯುವಕರು ಮತ್ತು ಮಕ್ಕಳು ಕೆಸರುಗದ್ದೆ ಆಟದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿ ಹೆಣ್ಣು ಮಕ್ಕಳು ಆಗಮಿಸಿರುವುದು ಮತ್ತಷ್ಟು ಸಂತೋಷವನ್ನುತಂದಿದೆಎಂದು ತಿಳಿಸಿದರು.
ಶ್ರೀಕೃಷ್ಣ ಪ್ರತಿμÁ್ಠನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಸೆಪ್ಟೆಂಬರ್ 11ರಂದು ನಡೆಯಲಿರುವ ಶ್ರೀ ಕೃಷ್ಣಜಯಂತಿ ಹಾಗೂ ಮೊಸರು ಮಡಿಕೆ ಹೊಡೆಯುವ ಉತ್ಸವ ಚಾಮರಾಜನಗರದ ಜನತೆಯ ಸಹಕಾರದಿಂದ ಯಶಸ್ವಿಯಾಗಿ ಕಳೆದ 13 ವರ್ಷಗಳಿಂದ ನಡೆಯುತ್ತಿದೆ. ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಲು ಕೆಸರಗದ್ದೆ ಆಟ, ಕಬಡ್ಡಿ ಪಂದ್ಯಾವಳಿ ಸ್ಪರ್ಧೆಯ ಮೂಲಕ ಜಾಗೃತಿ ಉಂಟು ಮಾಡಲಾಗುತ್ತಿದೆ. ಕೆಸರಿನ ಆಟದಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗಿದೆ ಮಣ್ಣಿನೊಂದಿಗೆ ಸಂಪರ್ಕವಾಗಿ ನವಶಕ್ತಿಯನ್ನುಉಂಟುಮಾಡುತ್ತದೆ. ಮಣ್ಣು ಮತ್ತು ಪ್ರಕೃತಿ ಸೌಂದರ್ಯದತೋಟದಲ್ಲ್ಲಿಕೆಸರುಗದ್ದೆ ನಡೆಯುತ್ತಿರುವುದು ಬಹಳ ಸಂತೋಷವನ್ನು ತಂದಿದೆ ಎಂದರು.
ಶ್ರೀ ಕೃಷ್ಣ ಪೂಜಾ ಕಾರ್ಯವನ್ನು ಶ್ರೀ ಕೃಷ್ಣ ಪ್ರತಿμÁ್ಠನದ ಪ್ರದೀಪ್‍ಕುಮಾರ್ ದೀಕ್ಷಿತ್ ರವರು ನೆರವೇರಿಸಿದರು. ತೋಟದ ಮಾಲೀಕರಾದ ಬಸವರಾಜು, ಹಾಲು ಗೋವಿಂದ, ಜೈ ಹಿಂದ್ ಪ್ರತಿμÁ್ಠನದ ಕುಸುಮ ಋಗ್ವೇದಿ, ಮಾಲಾ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ, ಸಾನಿಕ, ಚಂದನ್, ಮಂಜುನಾಥ್, ರಾಮ್ ಪ್ರಸಾದ್, ಶ್ರೀನಿಧಿ, ಮಹಾದೇವ ಇದ್ದರು.
ಕೆಸರುಗದ್ದೆಓಟ ಸ್ಪರ್ಧೆಯ ವಿಜೇತರು, ಯೋಗೇಶ್, ಯಶ್ವಂತ್, ರೋಹಿತ್, ನಾಗೇಂದ್ರ, ಮಹಿಳೆಯರ ವಿಭಾಗದಲ್ಲಿ ಧನಲಕ್ಷ್ಮೀ, ಚೈತ್ರ, ತೆಂಗಿನಕಾಯಿಯನ್ನುಕೆಸರಿನಲ್ಲಿ ಹುಡುಕುವ ಸ್ಪರ್ಧೆಯ ವಿಜೇತರು. ಪೂಜಾ, ಪ್ರೀತಿ, ಭೂಮಿಕ, ಸಿಂಚನ, ಶಿವು, ಯಶ್, ವಿಷ್ಣು ಭಾಗವಹಿಸಿದ್ದರು