ಕೆಸರುಗದ್ದೆಯಾದ ಕೂಡ್ಲಿಗಿ ಸಂತೆಮೈದಾನ, ಮುಕ್ತಿ ಯಾವಾಗ?


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.9 :- ಪಟ್ಟಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವಾರದ ಸಂತೆಮೈದಾನ ಸಂಪೂರ್ಣ ಕೆಸರುಗಡ್ಡೆಯಾಗಿದ್ದು ವಾರದ ಸಂತೆ ದಿನವಾದ ಇಂದು ಜನತೆ ಹಾಗೂ ವ್ಯಾಪಾರಸ್ಥರು ಕೇಸರಿನಲ್ಲೇ ಓಡಾಡಿದ ಪರಿಸ್ಥಿತಿ ಕಂಡುಬಂದಿತು.
ಇಲ್ಲಿರುವ ವಾರದ ಸಂತೆಮೈದಾನದಲ್ಲಿ ದನಕುರಿಸಂತೆ ಸಹ ನಡೆಸಲಾಗುತ್ತಿದ್ದು ಕುಡಿಯುವ ನೀರು ಹಾಗೂ ವಾರದ ಸಂತೆಗೆ ಬೇಕಾದ ಸೌಲಭ್ಯಗಳು ಇಲ್ಲದೆ ಕೊರತೆಯ ನಡುವೆ ಸುರಿದ ಮಳೆಯಿಂದ ಕೆಸರಿನಲ್ಲಿ ಓಡಾಡುವ ಪರಿಸ್ಥಿತಿ ಬಂದೊದಗಿದೆ ಈ ಸಮಸ್ಯೆಗೆ ಪರಿಹಾರ ನೀಗಿಸುವಲ್ಲಿ ಸಂಬಂದಿಸಿದ ಇಲಾಖೆ ಮರೆತಿದೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದು ಇದರ ಮುಕ್ತಿ ಯಾವಾಗ ಎಂಬಂತಾಗಿದೆ