ಕೆಸರುಗದ್ದೆಯಲ್ಲಿ ಸಿಸಿ ರಸ್ತೆ ನಿರ್ಮಾಣ

ಸೇಡಂ,ನ.02: ಗ್ರಾಮಗಳಲ್ಲಿ ಬೀದಿಯ ರಸ್ತೆಗಳು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಸಿಸಿ ರಸ್ತೆ ಗ್ರಾಮಗಳಲ್ಲಿ ಅಳವಡಿಸಲು ಮುಂದಾಗಿದೆ. ಆದರೆ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೂ ಮುಂಚಿತವಾಗಿ ಯಾವುದೇ ರೀತಿಯ ಕಲ್ವರ್ಟ್ ಆಗಲಿ, ಮುರುಮ್ ಆಗಲಿ, ಹಾಕದೆ ಕೆಸರು ಗದ್ದೆಅಂತಿರುವ ಮಣ್ಣಿನಲ್ಲಿಯೇ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅದು ಎಷ್ಟು ತಿಂಗಳುಗಳ ಕಾಲ ಇರುತ್ತದೆ ಎಂಬುದು ಒಂದು ಕಾದುನೋಡಬೇಕಾಗಿದೆ. ಬಿಜನಳ್ಳಿ ಗ್ರಾಮಸ್ಥರು ಕಂಡು ಕಾಣದಂತೆ ಕುಳಿತಿರುವುದು ವಿಪರ್ಯಾಸವೇ ಸರಿ? ಹಳೆಯ ಸಿಸಿ ರಸ್ತೆಯು ತಗ್ಗು ಗುಂಡಿಗಳ ಆಗಿದ್ದರಿಂದ ತಗ್ಗು ಮುಚ್ಚಲು 40mm ಕಾಂಕ್ರೆಟ್ ಹಾಕಿ ಸಿಸಿ ರಸ್ತೆ ಮಾಡುತ್ತಿರುವುದು ಎಷ್ಟು ವರ್ಷ ತಾಳಿಕೆ ಬರುತ್ತೆ ಎಂಬುದು ಕಾದು ನೋಡಬೇಕಾಗಿದೆ? ಸರ್ಕಾರದ ಕಡೆಯಿಂದ ಒಂದು ಬಾರಿ ಅನುದಾನ ಬರುವುದು ಬಹಳ ಕಷ್ಟ ಬಂದ ಅನುದಾನವನ್ನು ಉಪಯೋಗ ಮಾಡಿಕೊಳ್ಳದೆ ಇರುವುದು ಗ್ರಾಮಸ್ಥರ ದುರದೃಷ್ಟಕರ. ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಕಾಮಗಾರಿಯು ಎಚ್ ಕೆ ಆರ್ ಡಿ ಪಿ ಅನುದಾನದಡಿ ನಿರ್ಮಿಸಲಾಗುತ್ತಿದೆ.