ಕೆಸರುಗದ್ದೆಯಂತಾಗಿರುವ ಕುರುಗೋಡು ಉಪನೊಂದಣಾಧಿಕಾರಿಗಳ ಕಛೇರಿ ಆವರಣ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ. 10. ಪಟ್ಟಣದ ಉಪ-ನೊಂದಣಾಧಿಕಾರಿಗಳ ಕಛೇರಿ ಅವರಣದಲ್ಲಿ 4 ಇಲಾಖೆಗಳ ಕಛೇರಿಗಳು ಇದ್ದರೂ ಆ ಇಲಾಖೆಗಳ ಅಧಿಕಾರಿಗಳು ಮಾತ್ರ ತಮ್ಮ ಕಛೇರಿ ಮುಂದೆ ಇರುವ ಆರವಣವು ಮಳೆಬಂದರೆ ಸಾಕು ಅದು ಕೆಸರುಗದ್ದೆಯಾಗುತ್ತಿದ್ದರೂ  ಇಲ್ಲಿ ಕಾರ್ಯನಿರ್ವಹಿಸುವ 3,4 ಇಲಾಖೆಗಳ ಅಧಿಕಾರಿಗಳು ಮಾತ್ರ ಗೊತ್ತಿದ್ದರೂ ಮೂಕಪ್ರೇಕ್ಷಕರಂತೆ ದಿನನಿತ್ಯವೂ ಕಛೇರಿಗೆ ಹೋಗುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಕೆಸರುನಂತರಿವ ಆವರಣ ದಾಟಿ ಕಛೇರಿಗೆ ಹೋಗುತ್ತಾರೆ.  ಆದರೆ ಈ ಆವರಣದಲ್ಲಿ ಯಾವ ಇಲಾಖೆ ಅಧಿಕಾರಿಗಳು ಅದನ್ನು ಸರಿಪಡಿಸಬೇಕು ಎನ್ನುವ ಪರಿಜ್ಣಾನ ಯಾವ ಇಲಾಖೆ ಅಧಿಕಾರಿಗಳಿಗೆ ಕೊಂಚಿತ್ತೂ ಕಾಳಜಿ ಇಲ್ಲದಿರುವುದು ನಿಜಕ್ಕೂ ನಾಚಿಗೆಗೇಡಿನ ಸಂಗತಿ.
ಹೆಸರಿಗೆ ಉಪನೊಂದಣಾಧಿಕಾರಿಗಳ ಕಛೇರಿ ಆವರಣ.  ಆದರೆ ಈ  ಆವರಣದಲ್ಲಿ  ಉಪ-ಖಜಾನೆ ಕಛೇರಿ ಕುರುಗೋಡು, ನಾಡಕಾರ್ಯಾಲಯ ಕುರುಗೋಡು, ಮತ್ತು  ತಾಲೂಕುಪಂಚಾಯಿತಿ ಕಾರ್ಯಾಲಯ ಕುರುಗೋಡು ಕಾರ್ಯನಿರ್ವಹಿಸುತ್ತಿದ್ದರೂ ಆ ಕಛೇರಿಗಳ ಅಧಿಕಾರಿಗಳು ಮಾತ್ರ ನಮಗೆ ಸಂಬಂದವಿಲ್ಲದಂತೆ ನೋಡಿ-ನೋಡದಂಗೆ ಸುಖಾಸುಮ್ಮನೆ ಹೋಗುತ್ತಿರುವುದು ಯಾವ ನ್ಯಾಯ ಎಂದು ಈ ಕಛೇರಿಗಳಿಗೆ ಬರುವ ರೈತರು ಹಾಗು ಗ್ರಾಹಕರು ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿರುದ್ದ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇಲ್ಲಿನ  ಅವರಣ ಮಳೆಬಂದರೆ ಸಾಕು ಆವರಣವೆಲ್ಲವೂ ನೀರುತುಂಬಿ ಒಂದುರೀತಿಯಲ್ಲಿ ಕೆಸರುಗದ್ದೆಯಂತಾಗುತ್ತಿದೆ. ಅದರೆ ಇಲ್ಲಿ ಕಾರ್ಯನಿರ್ವಹಿಸುವ ವಿವಿದ ಇಲಾಖೆಗಳ ಅಧಿಕಾರಿಗಳು ನಮಗೆ ಸಂಬಂದವಿಲ್ಲದಂತೆ ಕೆಲಸಮಾಡುತ್ತಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರು, ಕೆಲ ವಾಹನಗಳ ಸವಾರರು ಬಿದ್ದು, ಪರದಾಡುವ ಸ್ತಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಪತ್ರಬರಹಗಾರ ಕೆ.ವಿರುಪಾಕ್ಷಗೌಡ ನೊಂದು ನುಡಿದಿದ್ದಾರೆ.
ಒತ್ತಾಯ ; ಕುರುಗೋಡಿನ ಉಪನೊಂದಣಾಧಿಕಾರಿಗಳ ಕಛೇರಿ ಆವರಣವು ಮಳೆಬಂದಾಗ  ಆವರಣವೆಲ್ಲ ತುಂಬ ನೀರುನಿಂತು ಕೆಸರುಗದ್ದೆಯಂತಾಗುತ್ತಿದೆ. ಈ ಅವರಣದಲ್ಲಿ ಕಾರ್ಯನಿರ್ವಹಿಸುವ 4 ಇಲಾಖೆಗಳ ಅಧಿಕಾರಿಗಳು ಕೂಡಲೇ ಗಮನಹರಿಸಿ ಕೆಸರುಗದ್ದೆಯಂತಾಗಿರುವ ಆವರಣವನ್ನು ಕೂಡಲೇ ಸಮತಟ್ಟಾಗುವಂತೆ ಸರಿಪಡಿಬೇಕು ಇಲ್ಲದಿದ್ದರೆ ಮುಂದಿನದಿನಗಳಲ್ಲಿ 4 ಇಲಾಖೆಗಳ ಅಧಿಕಾರಿಗಳ ವಿರುದ್ದ ಹೋರಾಟ ಮಾಡಬೇಕಾಗುತ್ತಿದೆ ಎಂದು  ಬೇಡ/ಬುಡ್ಗಜಂಗಮ ಕ್ಷೇಮಾಭಿವೃದ್ದಿ ಸಂಘದ ಕುರುಗೋಡು ತಾಲೂಕು ಘಟಕದ ಅದ್ಯಕ್ಷ  ಬುಡಗಜಂಗಮ ಶ್ರೀರಾಮು ಒತ್ತಾಯಿಸಿದ್ದಾರೆ.

Attachments area