ಕೆಸರಿಕರಣ ಮಾಡಿದರೇ ವಿವೇಕತೆ ಬರಲ್ಲ: ಪ್ರಿಯಾಂಕ್

ವಾಡಿ: ಮಾ.27: ಶಾಲೆಯ ಮಕ್ಕಳ ಜೀವನಕ್ಕೆ ಬೇಕಾಗುವ ಕಲಿಕಾ ಸಾಮಗ್ರಿ ನೀಡದರೇ ಉತ್ತಮ ನಾಗರೀಕರಾಗಿ ಹೋರಹೋಮ್ಮತ್ತಾರೆ. ಶಾಲೆಗಳಿಗೆ ಕೆಸರಿ ಬಣ್ಣ ಬಳಿದರೇ ವಿವೇಕ ಬರುವುದಿಲ್ಲ ಎಂದು ಮಾಜಿ ಶಾಸಕ, ಹಾಲಿ ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ ಕಲಬುರಗಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ ವಸತಿ ಶಾಲೆ, ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಾ, ಬಿಜೆಪಿ ಸರ್ಕಾರ ಭ್ರಷ್ಠಚಾರ ಮಾಡುವುದರಲ್ಲಿ ತೊಡಗಿದೆ. ವಿಧ್ಯಾರ್ಥಿಗಳ ಭವಿಷ್ಯದ ಚಿಂತೆ ಅವರಿಗಿಲ್ಲ. ಶಾಲಾ ಸಮಯ ಮುಗಿಯುವುದಕ್ಕೆ ಬಂದರು ಇನ್ನು ಗ್ರಾಮೀಣ ಭಾಗಕ್ಕೆ ಪಠ್ಯಪುಸ್ತಕ ತಲುಪಿಸಿಲ್ಲ. ಬಿಸಿ ಊಟದ ಜೊತೆ ಹಾಲು ನೀಡಲು ಆಗುತ್ತಿಲ್ಲ ಎಂದು ಅರೋಪಿಸಿದರು.

ಬಸವಣ್ಣನವರ ಅರಿವೇ ಗುರು ಎಂಬ ತತ್ವದಂತೆ ಶಿಕ್ಷಣವನ್ನು ಪಡೆಯುವ ನಿಟ್ಟಿನಲ್ಲಿ 1000 ಕೋಟಿ ರೂ ಅನುದಾನ ಒದಗಿಸಿದ್ದೆನೆ. ವಿಧ್ಯಾಭ್ಯಾಸ ಪಡೆದು ಮುಂದೆ ಉನ್ನತ ಹುದ್ದೆಯನ್ನು ಪಡೆಯಲಿ ಎನ್ನುವ ಆಶಾಭಾವನೆ ಹೊಂದಿದ್ದೆನೆ. ಹಿಂದೆ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನುಡಿದಂತೆ ನಡೆದಿದ್ದೆವೆ. ಈ ಬಾರಿಯು ಅಧಿಕಾರಕ್ಕೆ ಬಂದರೆ ಕಾಂಗ್ರೇಸ್ ಗ್ಯಾರಂಟಿಗಳನ್ನು ಜನರಿಗೆ ಪ್ರಮಾಣಿಕವಾಗಿ ತಲುಪಿಸುತ್ತೆವೆ ಎಂದರು.

ಕರ್ನಾಟಕದಲ್ಲಿ ನಡೆದಿರುವ ಸಮೀಕ್ಷೆಗಳು ಕಾಂಗ್ರೇಸ್ ಅಧಿಕಾರಕ್ಕೆ ಬರುವ ಲಕ್ಷಣಗಳು ತಿಳಿಸಿವೆ. ಜನರ ಬದುಕನ್ನು ಕಟ್ಟಲು ಅಧಿಕಾರಕ್ಕೆ ಬರುತ್ತೆವೆ ಎಂದು ಭವಿಷ್ಯ ನುಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಹಿರಿಯ ಮುಖಂಡರಾದ ಟೋಪ್ಪಣ್ಣ ಕೋಮಟೆ, ವೀರಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ ಮರತೂರ, ಪ್ರಾಂಶುಪಾಲ ಉದಯಕುಮಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಾಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೈಯ್ಯದ ಮಹೆಮೂದ ಸಾಹೇಬ, ಚಿತ್ತಾಪೂರ ಅಧ್ಯಕ್ಷ ಭೀಮಣ್ಣ ಶಾಲಿ, ಅಬ್ದುಲ ಅಜೀಜ ಸೇಠ, ಶ್ರೀನಿವಾಸ ಸಗರ, ನಾಗರೆಡ್ಡಿ ಪಾಟೀಲ್ ಕರದಾಳ, ಸಿದ್ದುಗೌಡ ಅಫಜಲಪೂರ, ಸಲೀಮ ನಾಲವಾರಕರ್, ಜಗದೀಶ ಸಿಂಧೆ, ತಹಸೀಲ್ದಾರ ಸೈಯ್ಯದ ಶಾಹ ವಲಿ, ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಯುವಮುಖಂಡರಾದ ಸೂರ್ಯಕಾಂತ ರದ್ದೇವಾಡಗಿ, ಶ್ರವಣಕುಮಾರ ಮೌಸಲಗಿ, ನಾಗೇಂದ್ರ ಜೈಗಂಗಾ, ನಾಸೀರ ಹುಸೇನ, ರಾಜಾಪಟೇಲ, ಗೋವಿಂದ ಸಗರ, ಯುನುಷ ಪ್ಯಾರೇ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಅನೇಕರು ಇದ್ದರು.