ಕೆ,ಶಿವನಗೌಡ ನಾಯಕ ಅವರಿಗೆ ನಾಗೋಲಿ ಗ್ರಾಮಸ್ಥರಿಂದ ಸನ್ಮಾನ

ಅರಕೇರಾ.ಆ.೦೬- ಮಲ್ಲೇದೇವರ ಗುಡ್ಡ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಬಾಲಮ್ಮ ಗಂಡ ಶಾಂತಪ್ಪ ಬಾಗ್ಲಿ ಸಾ. ನಾಗೋಲಿಯವರು ಅವಿರೋಧವಾಗಿ ಆಯ್ಕೆಯಾಗಿದ್ದ ಪ್ರಯುಕ್ತ ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ರವರ ಅರಕೇರಾ ನಿವಾಸದಲ್ಲಿ ಶಾಸಕರಿಗೆ ಸನ್ಮಾನಿಸಿಗೌರವಿಸಿದರು.
ನಂತರ ಅವಿರೋಧವಾಗಿ ಆಯ್ಕೆಯಾದ ಬಾಲಮ್ಮ ಇವರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ವಿರೇಶ ನಾಯಕ ಮಲ್ಲೇದೇವರ ಗುಡ್ಡ, ಕೆ,ಭಗವಂತ್ರಾಯ ನಾಯಕ, ಶರಣಪ ನಾಯಕ ಬುದ್ದಿನ್ನಿ ಮುದಿರಂಗಪ ಬಾಗ್ಲಿ, ಮಹಾದೇವಪ್ಪಗುತ್ತೇದಾರ ಹನುಮಯ್ಯ ಅಬಕಾರಿ, ನಿಜಪ್ಪ,ಅನೀಲ್ ಕುಮಾರ ನರಸಪ್ಪ ಗುತ್ತೇದಾರ, ಬೀಮರಾಯ ನಾಗೋಲಿ, ಹನುಮಂತ, ವೀರೇಶ,ಹನುಮೇಶ ನಾಯಕ ಜುಟ್ಟಮರಡಿ,ಗ್ರಾಮ ಪಂಚಾಯತ ಸದಸ್ಯರಾದ ಉಮಾದೇವಿ, ಮಲ್ಲಮ್ಮ ಹಾಗೂ ಗ್ರಾಮದ ಮುಖಂಡರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.