
ಮಾನ್ವಿ,ಮೇ.೨೪- ರೈತರಿಗೆ ನೆರವಾಗಲು ಜಾರಿಗೊಂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಣಿಯಾದ ರೈತರನ್ನು ಇ-ಕೆವೈಸಿ ಮಾಡಿಸಲು ಮಾನ್ವಿ ತಾಲೂಕಿನ ಸಹಾಯಕ ಕೃಷಿ ಇಲಾಖೆ ಹರಸಾಹಸ ಪಡುವಂತಾಗಿದೆ.
ತಾಲೂಕುಗಳ ವ್ಯಾಪ್ತಿಯಲ್ಲಿ ಈಗಾಗಲೇ ಪಿಎಂ ಕಿಸಾನ್ ಯೋಜನೆಯಡಿ ನೋಂದಣಿಯಾದ ಫಲಾನುಭವಿ ರೈತರಿಗೆ ಈಗಾಗಲೇ ಕಂತಿನ ಪ್ರಕಾರ ತಲಾ ೨ ಸಾವಿರ ರೂ. ಹಣ ಜಮಾ ಮಾಡಲಾಗುತ್ತಿದೆ ಮಂದಿನ ಹದಿನಾಲ್ಕನೆಯ ಕಂತಿನ ಹಣ ಬರಬೇಕಾದಲ್ಲಿ ಕಡ್ಡಾಯವಾಗಿ ಕೆ ವೈ ಸಿ ಮಾಡುವಂತೆ ಅಧಿಕಾರಿಗಳು ರೈತರ ಬೆನ್ನು ಬಿದ್ದಿದ್ದಾರೆ.
ಇದರಿಂದ ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇ-ಕೆವೈಸಿ ಮಾಡಿಸಲು ಇನ್ನಿಲ್ಲದ ಪ್ರಯತ್ನ ನಡೆಸುವಂತಾಗಿದೆ. ತಾಲೂಕಿನ ನಿಗದಿಪಡಿಸಿದ ಗುರಿಯಲ್ಲಿ ಈವರೆಗೆ ಕೇವಲ ಶೇ.೫೦ರಷ್ಟು ಮಾತ್ರ ರೈತರು ನೋಂದಣಿಯಾಗಿದ್ದು, ಗುರಿ ಸಾಧಿಸಲು ಇಲಾಖೆಯಿಂದ ಜಿಲ್ಲೆಯ ಗ್ರಾಮೀಣ ಭಾಗದ ರೈತರ ಮನೆ ಬಾಗಿಲೆಗೆ ತೆರಳಿ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಲು ಮುಂದಾಗಿದೆ ಇದರಿಂದ ರೈತರಿಗೆ ತುಂಬಾ ಅನುಕೂಲ ಆಗುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಬಸವರಾಜ ಹೇಳಿದರು.