ಕೆವಿಟಿ ನಗರದ ಉದ್ಯಾನವನ ಜಲಾವೃತ

ಬಳ್ಳಾರಿ, ಜೂ.08: ನಗರದ ರಾಘವೇಂದ್ರ ಕಾಲೋನಿ ಬಳಿ ಇರುವ ಕೆ.ವಿ.ತಿರುಮಲಪ್ಪ ನಗರದ ಉದ್ಯಾನವನ ಜಲಾವೃತಗೊಂಡಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಉದ್ಯಾನವನದ ಬಹುತೇಕ ಭಾಗ ನೀರಿನಿಂದ ತುಂಬಿದೆ. ಅಷ್ಟೇ ಅಲ್ಲದೆ ಸುತ್ತ ಮುತ್ತಲ ಚರಂಡಿ ಮೂಲಕ ಹೊರ ಹೋಗಬೇಕಾದ ನೀರು ಹೊರ ಹೋಗದೆ ಅಲ್ಲಿಯೇ ನಿಂತಿರುವುದರಿಂದ ಮಲೀನತೆ ಹೆಚ್ಚಿ ಸೊಳ್ಳೆಗಳ ಕಾಟವೂ ಹೆಚ್ಚಿದೆ. ಕೂಡಲೇ ಮಳೆ ಬಂದರೆ ಉದ್ಯಾನವನದಲ್ಲಿ ನಿಲ್ಲುವ ನೀರು ಹೊರ ಹರಿದು ಹೋಗುವ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯ ಮುಖಂಡ ಎಂ.ನಾಗರಾಜರೆಡ್ಡಿ ಮೊದಲಾದವರು ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಿದರು. ನಿರ್ಲಕ್ಷ್ಯವಹಿಸಿ ಈ ವರೆಗೆ ಕ್ರಮ ಜರುಗಿಲ್ಲವೆಂದು ಅವರು ದೂರಿದ್ದಾರೆ.
ಈ ಮಧ್ಯೆ ಈ ಪ್ರದೇಶದ ನೂತನ ಕಾರ್ಪೊರೇಟರ್ ನಂದೀಶ್ ಮುಲ್ಲಂಗಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಬಗ್ಗೆ ಹೇಳಿ ಹೋಗಿದ್ದಾರಂತೆ.