ಕೆವಿಜಿ ಆಯುರ್ ನ್ಯೂಸ್ ತ್ರೈಮಾಸಿಕ ಪತ್ರಿಕೆ ಬಿಡುಗಡೆ

ಸುಳ್ಯ, ಡಿ೨೯- ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಯುರ್ ನ್ಯೂಸ್ ತ್ರೈಮಾಸಿಕ ಪತ್ರಿಕೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಆಯುರ್ವೇದ ದಿನಾಚರಣೆಯ ಅಂಗವಾಗಿ ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯದ ಹಾಗೂ ವಿಶ್ವ ಆಯುರ್ವೇದ ಪರಿಷತ್ ಇದರ ಸಹಯೋಗದ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪೋಸ್ಟರ್ ಮತ್ತು ಸ್ಲೋಗನ್ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜಿನ ವಿದ್ಯಾರ್ಥಿಗಳಾದ ಮಲ್ಲಿಕಾಭಟ್, ಪುನೀತ್ ರಾಜ್ ಆರ್. ಎಂ., ನಮಿತಾ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಕೆ.ವಿ.ಜಿ ಆಯುರ್ವೇದ ಫಾರ್ಮಾ ರಿಸರ್ಚ್ ಸೆಂಟರ್ ನ ವಿಭಾಗ ಮುಖ್ಯಸ್ಥ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಪುರುಷೋತ್ತಮ ಕೆ.ಜಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್‌ನ ಖಜಾಂಜಿ ಶೋಭಾ ಚಿದಾನಂದ, ನಿರ್ದೇಶಕರಾದ ಅಕ್ಷಯ್ ಕೆ. ಸಿ., ಡಾ. ಐಶ್ವರ್ಯ ಕೆ. ಸಿ., ಡಾ. ಗೌತಮ್ ಗೌಡ, ಕೆ.ವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ ಅಡ್ತಲೆ ಉಪಸ್ಥಿತರಿದ್ದರು. ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಿನ್ಸಿಪಾಲ್ ಡಾ.ಲೀಲಾಧರ್ ಡಿ. ವಿ. ವಂದಿಸಿ ಶುಭ ಹಾರೈಸಿದರು. ಆಯುರ್ ನ್ಯೂಸ್ ಪತ್ರಿಕೆಯ ಸಂಪಾದಕಿ ಡಾ. ಹರ್ಷಿತಾ ಪುರುಷೋತ್ತಮ, ಸಹ ಸಂಪಾದಕರಾದ ಡಾ. ಯು. ಸಂತೋಷ್ ನಾಯಕ್, ಡಾ. ಗೌರಿಶಂಕರ್ ಸಿ. ಕೆ.ಹಾಗೂ ಸಂಸ್ಥೆಯ ಉಪನ್ಯಾಸಕ ವೃಂದಹಾಗೂ ಅಧ್ಯಾಪಕೇತರ ವರ್ಗದವರು ಉಪಸ್ಥಿತರಿದ್ದರು.