ಕೆವಿಜಿ ಆಯುರ್ವೇದ ಕಾಲೇಜುನಲ್ಲಿ ನೂತನ ಉತ್ಪನ್ನ ಭೃಂಗಾಮಲಕಾದಿ ತೈಲ ಬಿಡುಗಡೆ

ಸುಳ್ಯ : ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದಿಂದ ತಯಾರಿಸಲ್ಪಟ್ಟ ಭೃಂಗಾಮಲಕಾದಿ ತೈಲವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಆಯುರ್ವೇದ ಔಷಧಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಔಷಧಿಗಳನ್ನು ತಯಾರು ಮಾಡಿ ಸಮಾಜದ ಒಳಿತಿಗಾಗಿ ನಾವೆಲ್ಲರೂ ಈ ಕಾಲಘಟ್ಟದಲ್ಲಿ ಶ್ರಮಿಸುವ ಅಗತ್ಯ ಇದೆ ಎಂದು ಡಾ| ಕೆ.ವಿ.ಚಿದಾನಂದ ಹೇಳಿದರು.
ಕೆ.ವಿ.ಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನ ವಿಭಾಗ ಮುಖ್ಯಸ್ಥರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಪುರುಷೋತ್ತಮ ಕೆ. ಜಿ. ಹೊಸ ಉತ್ಪನ್ನದ ಕುರಿತು ಮಾಹಿತಿ ನೀಡಿದರು. ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್‌ನ ಖಜಾಂಜಿ ಶೋಭಾ ಚಿದಾನಂದ, ನಿರ್ದೇಶಕರಾದ ಅಕ್ಷಯ್ ಕೆ.ತಿಸಿ., ಡಾ. ಐಶ್ವರ್ಯ ಕೆ. ಸಿ., ಡಾ. ಗೌತಮ್ ಗೌಡ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಲೀಲಾಧರ್ ಡಿ.ವಿ., ಕೆವಿಜಿಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ ಅಡ್ತಲೆ, ಡಾ. ಹರ್ಷಿತಾ ಪುರುಷೋತ್ತಮ, ಡಾ. ರೋಹಿತ್ ಕೃಷ್ಣನ್ ಜಿ. ಬಿ.,ಸಂಸ್ಥೆಯ ಉಪನ್ಯಾಸಕ ವೃಂದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.