ಕೆಳ ಭಾಗದ ರೈತರ ನೀರಿಗಾಗಿ ಜನಪ್ರತಿಗಳೇ ಧ್ವನಿಯಾಗಿ

ಮಾನ್ವಿ,ಆ.೦೨ – ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ತಲುಪಬೇಕಾದ ಕಾಲುವೆ ನೀರು ವಿಳಂಬವಾಗಿದ್ದು ಈಗಾಗಲೇ ಭತ್ತ ನಾಟಿ ಮಾಡಿರುವ ರೈತರ ಹೊಲಕ್ಕೆ ನೀರಿಲ್ಲದೆ ಇಳುವರಿ ಕಡಿಮೆಯಾಗುವ ಹಂತದಲ್ಲಿದೆ ಕೂಡಲೇ ನಮ್ಮ ಭಾಗದ ಶಾಸಕರು ಜಲ ಸಂಪನ್ಮೂಲ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಕೂಡಲೇ ಕಾಲುವೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.
ಪಟ್ಟಣದ ಪತ್ರಿಕಭವದಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ತುಂಗಭದ್ರಾ ಅಣೆಕಟ್ಟಿನಲ್ಲಿ ಈಗಾಗಲೇ ೮೦ ಟಿಎಂಸಿ ನೀರು ಸಂಗ್ರಹವಾಗಿದೆ ಆದರೆ ಶಿವಪುರ ಗೇಟ್ ಸಿಥೀಲಗೊಂಡಿರುವ ಕಾಮಗಾರಿಯನ್ನು ಮೇ ತಿಂಗಳಿನಲ್ಲಿಯೇ ಪೂರ್ಣಗೊಳಿಸಿ ಈಗಾಗಲೇ ಕೆಳ ಭಾಗದ ರೈತರಿಗೆ ನೀರು ಹರಿಸಬೇಕಾಗಿತ್ತು ಆದರೆ ಅದರ ಕಾಮಗಾರಿಯೂ ತುಂಬಾ ವಿಳಂಬವಾಗಿದ್ದು ರೈತರ ಸಂಕಷ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅರ್ಥವಾದಿಂತೆ ಎಂದು ಪ್ರಶ್ನೆ ಮಾಡಿದರು.
ಕೂಡಲೇ ನಮ್ಮ ಭಾಗದ ಶಾಸಕರು ಈ ವಿಷಯವನ್ನು ಜಲಸಂಪನ್ಮೂಲ ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ರೈತ ಮುಖಂಡರ ಜೊತೆಗೆ ಸಭೆಯನ್ನು ಆಯೋಜನೆ ಮಾಡಬೇಕು ಹಾಗೂ ಮೇಲ್ಬಾಗದಲ್ಲಿನ ಕೆಲವರು ಅಕ್ರಮವಾಗಿ ಕಾಲುವೆ ನೀರನ್ನು ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಹಾಗೂ ಸರಿಯಾದ ಸಮಯಕ್ಕೆ ನಮ್ಮ ಭಾಗಕ್ಕೆ ನೀರ ಹರಿಸಬೇಕು ಎಂದು ಆಗ್ರಹಿಸಿದರು..
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಮಲ್ಲಿಗೆ, ಲಿಂಗಾರಡ್ಡಿ ಪಾಟೀಲ, ತಾ ಅಧ್ಯಕ್ಷ ಸಿದ್ದಯ್ಯ ಸ್ವಾಮಿ, ಬಿ ಶಂಕರಗೌಡ, ಅಮರೇಶ ಆಲ್ದಾಳ್ ಇದ್ದರು.