ಕೆಳ ಭಾಗದ ರೈತರಿಗೆ ಸಮರ್ಪಕ ನೀರಿಗಾಗಿ ದದ್ದಲ್ ಆಗ್ರಹ

ರಾಯಚೂರು.ನ.೨೪- ಗ್ರಾಮೀಣ ಕ್ಷೇತ್ರದ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಶಾಸಕ ಬಸವನಗೌಡ ದದ್ದಲ್ ಅವರು ಒತ್ತಾಯಿಸಿದರು.
ನಿನ್ನೆ ಮುನಿರಾಬಾದ್ ಸಭಾಂಗಣದಲ್ಲಿ ಪ್ರವಾಸೋದ್ಯಮ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ
ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ೧೧೮ನೇ ನೀರಾವರಿ ಸಲಹಾ ಸಮಿತಿ ಕಾಡಾ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಭಾಗವಹಿಸಿದ್ದ ಬಸವನಗೌಡ ದದ್ದಲ್ ರವರು, ರಾಯಚೂರು ಗ್ರಾಮೀಣ ಕ್ಷೇತ್ರದ ಜನರಿಗೆ ನೀರಿನ ಅಭಾವವಾಗದಂತೆ, ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಲಭ್ಯವಾಗಬೇಕು. ಏಕೆಂದರೆ ಈಗ ಭತ್ತ, ಹತ್ತಿ, ಮೆಣಸಿನಕಾಯಿಗೆ ನೀರು ಕಟ್ಟಿಕೊಳ್ಳುವ ಅವಶ್ಯಕತೆ ಇದೆ. ಆದ್ದರಿಂದ ಕೆಳಭಾಗದ ರೈತರಿಗೆ ನೀರು ಪೂರೈಕೆಯಾಗಬೇಕು. ಹಿರಿಯ ಅಧಿಕಾರಿಗಳು ಕೆಳ ಭಾಗದವರೆಗೆ ನೀರು ಹರಿಯುತ್ತದೆ ಇಲ್ಲ ಎಂದು ನೋಡಿಕೊಳ್ಳಬೇಕು. ಹಿರಿಯ ಅಧಿಕಾರಿಗಳು ಬರೀ ಡ್ಯಾಮ್ ಅಲ್ಲಿ ಕೂಳಿತುಕೊಂಡಿದ್ದರೆ ಕೆಳ ಭಾಗದವರೆಗೆ ನೀರು ತಲುಪಿದೆಯಾ ಎನ್ನುವುದು ಹೇಗೆ ತಿಳಿಯುತ್ತದೆ.
ಆದ್ದರಿಂದ ಹಿರಿಯ ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ಯರಮರಸ್‌ನಲ್ಲಿ ಸಭೆ ಕರೆಯಬೇಕು. ಇಲ್ಲಂದ್ರೆ ಕೆಳ ಅಧಿಕಾರಿಗಳು ಎಷ್ಟೆ ಪ್ರಯತ್ನಿಸಿದರು ನೀರು ಕೆಳ ಭಾಗದ ರೈತರಿಗೆ ನೀರು ಲಭ್ಯವಾಗೋದಿಲ್ಲ. ರೈತರ ನಿರಿಕ್ಷೇಯನ್ನು ಉಸಿ ಮಾಡಬೇಡಿ. ಕೊನೆಭಾಗದವರಿಗೆ ನೀರು ಹರಿಬಿಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ. ಸಭೆಯಲ್ಲಿ ಸಚಿವರು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು, ನೀರಾವರಿ ಸಲಹೆ ಸಮಿತಿಯ ಸದಸ್ಯರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.