
ಮಾನ್ವಿ,ಆ.೧೭-
ಮುನಿರಾಬಾದ್ ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಂಸ್ಥೆಯ ೧೧೯ನೇ ನೀರಾವರಿ ಸಲಹಾ ಸಮಿತಿಯಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಹಾಗೂ ಈ ಭಾಗದ ಸಚಿವರ,ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು ತುಂಗಭದ್ರ ಜಲಾಶಯದಲ್ಲಿನ ಇಂದಿನ ಲಭ್ಯ ನೀರಿಗನುಗುಣವಾಗಿ ಅ.೩ರಿಂದ ಕಾಲುವೆಗಳಿಗೆ ನೀರು ಬಿಡಲಾಗಿದೆ ನವಂಬರ್ ಕೊನೆವರೆಗೆ ೪ ತಿಂಗಳ ಕಾಲ ರೈತರ ಬೆಳೆಗೆ ನೀರು ಬಿಡುವುದಕ್ಕೆ ತಿರ್ಮಾನ ಮಾಡಲಾಗಿದೆ ಎಂದು ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ಮುಂಗಾರಿನ ಅವಧಿಯಲ್ಲಿ ಕಾಲವುವೆಗಳಿಗೆ ನೀರನ್ನು ಬಿಟ್ಟಗ ಈ ಭಾಗದಲ್ಲಿ ಮಳೆಯಾಗುತಿತ್ತು ಆಗ ರೈತರ ಜಮೀನಿಗೆ ಸುಲಾಭವಾಗಿ ನೀರು ದೊರೆಯಲು ಸಾಧ್ಯವಾಗುತಿತ್ತು, ಈ ಬಾರಿ ಮಳೆಯಾಗದೆ ಇರುವುದರಿಂದ ರೈತರ ಬೆಳೆಗೆ ನೀರು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಅದರಂತೆಯೇ ಜಲಾಶಯಕ್ಕೆ ಇನ್ನೂ ೨೦ ಟಿ.ಎಂ.ಸಿ. ನೀರು ಸಂಗ್ರಹವಾದಲ್ಲಿ ಮಾತ್ರ ಎರಡನೇ ಬೆಳೆಗೆ ನೀರು ಬಿಡಲು ಸಾಧ್ಯವಾಗುತ್ತದೆ. ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಕೆಳಭಾಗದಲ್ಲಿನ ರೈತರ ಜಮೀನುಗಳಿಗೆ ನೀರು ತಲುಪಬೇಕಾದಲ್ಲಿ ಮೈಲ್ ೪೭,೬೯,೧೦೪ರಲ್ಲಿ ೯ ಅಡಿ ಗೇಜ್ ನಿರ್ವಹಣೆ ಮಾಡಬೇಕು ಹಾಗೂ ಆನಧಿಕೃತ ನೀರವಾರಿಯನ್ನು ತಡೆಯಬೇಕು, ಕಾಲುವೆಗೆ ೪೭೦೦ ಕ್ಯೂಸೆಕ್ಸೆ ನೀರನ್ನು ಬಿಟ್ಟಲ್ಲಿ ಮಾತ್ರ ಜಿಲ್ಲೆಯ ಕೆಳಭಾಗದಲ್ಲಿನ ತಾಲೂಕಿನ ರೈತರ ಜಮೀನಿಗೆ ನೀರು ತಲುಪಲು ಸಾಧ್ಯವಾಗುವುದರಿಂದ ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳು ಸಮನ್ವಯತೆಯಿಂದ ನೀರಾವರಿ ಇಲಾಖೆಗೆ ಸಹಕಾರ ನೀಡಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.