ಕೆಳಭಾಗಕ್ಕೆ ನೀರು ಹರಿಸಲು ಒತ್ತಾಯಿಸಿ ಮುತ್ತಿಗೆ

ಸಿರವಾರ.ಜ.೭-ತುಂಗಭದ್ರ ಎಡದಂಡೆ ನಾಲೆಯ ಕೊನೆಭಾಗದ (೯೨ ನೇ ವಿತರಣಾ) ವ್ಯಾಪ್ತಿಯ ಜಕ್ಕಲದಿನ್ನಿ, ಭಾಗ್ಯನಗರ ಕ್ಯಾಂಪ್, ಗಣದಿನ್ನಿ ಸೇರಿದಂತೆ ಕೆಳಭಾಗದ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕರ ಅಭಿಯಂತರರ ಕಚೇರಿಗೆ ಬುಧುವಾರ ಮುತ್ತಿಗೆ ಹಾಕಿದರು.
ಸಿರವಾರ, ಗಣದಿನ್ನಿ, ಮಾಚನೂರು, ಬೇವಿನೂರು, ಜಕ್ಕಲದಿನ್ನಿ, ಗ್ರಾಮಗಳಲ್ಲಿ ರೈತರು ಹತ್ತಿ, ಮೆಣಸಿನಕಾಯಿ, ಜೋಳ ಬೆಳೆಗಳನ್ನು ಬೆಳೆದಿದ್ದು ಬೆಳೆ ಈಗ ಉತ್ತಮವಾಗಿ ಬೆಳೆದು ನಿಂತಿವೆ. ಈಗ ನೀರು ಬಿಡದಿದ್ದರೆ ಬೆಳೆ ಒಣಗಿ ಹೋಗುತ್ತದೆ. ಆದ ಕಾರಣ ೧೦೪ನೇ ಮೈಲ್‌ಗೆ ೬ ಅಡಿ ನೀರು ಕೊಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಇನ್ನು ೨ ದಿನಗಳಲ್ಲಿ ೯೨ನೇ ಕಾಲುವೆಗೆ ನೀರು ಹರಿಸದಿದ್ದಲ್ಲಿ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ನಂತರ ನೀರಾವರಿ ಇಲಾಖೆಯ ಕಿರಿಯ ಅಭಿಯಂತರರಾದ ಮಲ್ಲಿಕಾರ್ಜುನ ಹಾಗೂ ತಹಶೀಲ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಹನುಮಣ್ಣ ಬಂಗಿ, ದೇವರಾಜ, ಈರಪ್ಪ, ಶೇಖರಪ್ಪ, ಬಸವರಾಜ ಮಡಿವಾಳ, ಮಹಾದೇವಪ್ಪ, ಗಂಗಪ್ಪ, ಪ್ರಕಾಶ, ಜಯರಾಜ ಸೇರಿದಂತೆ ಸುತ್ತಮುತ್ತಲಿನ ರೈತರಿದ್ದರು.