ಕೆಳದಿ ಚೆನ್ನಮ್ಮ ಪ್ರಶಸ್ತಿ ಭಾಜನರಾಗಿರುವ ಶಿವಮಹಿಮಾಗೆ ಸನ್ಮಾನ

ಔರಾದ :ಎ.20: ಕೆಳದಿ ಚೆನ್ನಮ್ಮ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿರುವ ಔರಾದ ಪಟ್ಟಣದ ಕುಮಾರಿ ಶಿವಮಹಿಮಾ ಮನೋಹರ ಕಾಡೊದೆ ಅವರಿಗೆ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಸನ್ಮಾನಿಸಲಾಯಿತು. ತನ್ನ ಕಿರಿಯ ವಯಸ್ಸಿನಲ್ಲೇ ಪ್ರಶಸ್ತಿ ಪಡೆದ ಶಿವಮಹಿಮಾ ಅವರ ಸಾಧನೆ ಸರ್ವರಿಗೂ ಮಾದರಿ ಎಂದು ಆದರ್ಶ ವಿದ್ಯಾಲಯದ ಮುಖ್ಯಗುರು ಧೂಳಪ್ಪಾ ಮಳೆನೂರ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಮಹಾದೇವ ಚಿಟಗಿರೇ, ಎಬಿವಿಪಿ ಪ್ರಮುಖ ಅಶೋಕ ಶೆಂಬೇಳಿ , ಲಿಂಗಾಯತ ಸಮಜದ ಅಧ್ಯಕ್ಷ ವಿರೇಶ ಅಲ್ಮಾಜೆ, ಬಸವಕುಮಾರ ಮುದ್ದಾಳೆ , ನಾಗನಾಥ ಸುರಂಗೆ, ದೋಡ್ಡೇಶ ತಳವಾರ, ಹಾಗೂ ನಿಲಗಂಗಾ ಚಿಟ್ಮೆ, ಹಾಗೂ ಸಂಗಡಿಗರು ಉಪಸ್ಥಿತರಿದ್ದರು