ಕೆಳಗೆ ಎತ್ತಿ ಹಾಕ್ತೀನಿ…!!!

ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು “ಡಿ ಬಾಸ್” ಎಂದು ಪ್ರೀತಿ ಅಭಿಮಾನದಿಂದ ಅವರ ಅಭಿಮಾನಿಗಳು ಕರೆಯುವುದುಂಟು ‌.!!

ಹೀಗಿರುವಾಗ ನಟಿಯರು ಅಥವಾ ನಟರು ದರ್ಶನ್ ಅವರನ್ನು ಅಂಕಲ್ ಎಂದು ಕರೆಯುತ್ತಾರೆ..‌ ಊಹಿಸಿಕೊಳ್ಳಲು ಆಗುವುದಿಲ್ಲ..

ಆದರೂ ಇಂತಹದೊಂದು ವಿಷಯವನ್ನು ನಟ ದರ್ಶನ್ ಸ್ವತ: ಬಾಯಿ ಬಿಟ್ಟಿದ್ದಾರೆ‌..

“ಚೆಲುವಿನ ಚಿತ್ತಾರ” ಮೂಲಕ ನಟಿಯಾಗಿ ಗುರುತಿಸಿಕೊಂಡು ಹಲವು ಯಶಸ್ವಿ ಚಿತ್ರ ನೀಡಿದವರು ಅಮೂಲ್ಯ. ನಾಯಕಿಯಾಗುವ ಮುನ್ನ ಬಾಲ ನಟಿಯಾಗಿಯೂ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು..
ಪಕ್ಷದ ಅಭ್ಯರ್ಥಿಯೊಬ್ಬರ ಪರ ಚುನಾವಣಾ ಪ್ರಚಾರದ ಅದು…

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟಿ ಅಮೂಲ್ಯ ,ಅವರ ಪತಿ ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು..

ಈ ವೇಳೆ ನಟಿ ಅಮೂಲ್ಯ ಡಿ ಬಾಸ್ ಜೊತೆ ಪ್ರಚಾರದಲ್ಲಿ ಪಾಲ್ಗೊಂಡಿರುವುದು ಖುಷಿ ಕೊಟ್ಟಿದೆ ಅವರ ಬಗ್ಗೆ ಏನು ಹೇಳಲಿ.ನನಗೆ ಮಾತುಗಳೇ ಬರುತ್ತಿಲ್ಲ ಎಂದು ನಾಚಿ ನೀರಾದರು..

ಪಕ್ಕದಲ್ಲಿಯೇ ವಾಹನದ ಮೇಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ನನ್ನನ್ನು ಮೊದಲು ಅಂಕಲ್ ಅಂತ ಕರೆದಿದ್ದೇ ಅಮೂಲ್ಯ…

ಅಂಕಲ್ ಎಂದು ಕರಿ ಎನ್ನುವ ದರ್ಶನ್ ಅವರ ಪ್ರೀತಿಗೆ ಅಮೂಲ್ಯ ಅಭಿಮಾನದಿಂದಲೇ ನಾನು ಹಾಗೆ ಕರೆಯೊಲ್ಲ ಅಂದು ಬಿಟ್ಟರು…!!

ಆಗ ನೀನು ಅಂಕಲ್ ಕರೀಲಿಲ್ವಾ ಅಂದ್ರೆ ಗಾಡಿಯಿಂದ ಎತ್ತಿ ಕೆಳಗೆ ಹಾಕುತ್ತೇನೆ ಎಂದು ದರ್ಶನ್ ಮತ್ತೊಮ್ಮೆ ಪ್ರೀತಿಯಿಂದಲೇ ಮುದ್ದು ಮಾಡುತ್ತಲೇ ಆಗ್ರಹಿಸಿದರು…

ಆಗಲೂ ನಾನು ಹಾಗೆ ಕರೆಯಲ್ಲಾ ಎಂದು ಊಹುಂ ಅಂದರು‌..

ಪಕ್ಕದಲ್ಲೇ ಇದ್ದ ನಟಿ ಅಮೂಲ್ಯ ಅವರ ಪತಿ ಜಗದೀಶ್ ಕೂಡ ಚಾಲೆಂಜಿಂಗ್ ಸ್ಟಾರ್‌ದರ್ಶನ್ ಮತ್ತು ಅಮೂಲ್ಯ ಅವರ ಸಂಭಾಷಣೆ ಕೇಳುತ್ತಾ ಇಬ್ಬರನ್ನೂ ನೋಡುತ್ತಿದ್ದರು..!!